ಸಂತೋಷದ ಹಿಂದಿನ ರಹಸ್ಯ

ಸಂತೋಷದ ಹಿಂದಿನ ರಹಸ್ಯ

ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂತೋಷವನ್ನು ಬಯಸುತ್ತಾರೆ. ಸಂತೋಷವನ್ನು ಕಂಡುಕೊಳ್ಳುವುದು ಅಂದುಕೊಂಡಷ್ಟು ಸುಲಭ ಎಂದು ನೀವು ಭಾವಿಸುತ್ತೀರಾ? ಈ ಪ್ರಸ್ತುತ ಹಂತದಲ್ಲಿ ನಾವು ನಿಜವಾಗಿಯೂ ಸಂತೋಷವಾಗಿದ್ದೇವೆಯೇ?

ಸಂತೋಷವೆಂಬುದು ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಅದು ಇಡೀ ಕುಟುಂಬಕ್ಕೆ ಒಳಗೊಂಡಿರುತ್ತದೆ. ನಮ್ಮ ಕುಟುಂಬದವರು ಸಂತೋಷವಾಗಿದ್ದರೆ ಮಾತ್ರ ನಾವು ಜೀವನದಲ್ಲಿ ಸಂತೋಷವಾಗಬಹುದು. ನಮ್ಮ ಕುಟುಂಬವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಾವು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸಂತೋಷ ನಮ್ಮ ಕುಟುಂಬದ ಸಂತೋಷದೊಂದಿಗೆ ಪರಸ್ಪರ ಸಂಬಂಧ ಹೊಂದಿರುತ್ತದೆ.

ಸಂತೋಷ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸಿದರೆ, ನಮ್ಮ ಕುಟುಂಬಗಳು ಸಂತೋಷವಾಗಿರುತ್ತವೆ. ಅದೇ ರೀತಿ, ಜೀವನದಲ್ಲಿ ಕೆಟ್ಟ ಸಂಗತಿಗಳು ಸಂಭವಿಸಿದ್ದಲ್ಲಿ, ನಮ್ಮ ಕುಟುಂಬಗಳು ದುಃಖವನ್ನು ಅನುಭವಿಸುತ್ತವೆ.

ಜನನ ಮತ್ತು ಮರಣದ ನಡುವೆ, ನಾವು ಭೂಮಿಯಲ್ಲಿ ವಾಸಿಸುವಷ್ಟು ದಿನಗಳನ್ನು “ಜೀವನ” ಎಂದು ಕರೆಯಲಾಗುತ್ತದೆ. ಜೀವನವೆಂಬುದು ಶಿಕ್ಷಣ, ವೃತ್ತಿ (ಉದ್ಯೋಗ/ವ್ಯವಹಾರ/ ಕೃಷಿ), ಮದುವೆ, ಸಂಬಂಧ, ಹಣಕಾಸು, ಆರೋಗ್ಯ, ಕನಸಿನ ಮನೆ, ನಿವೃತ್ತ ಜೀವನ ಸೇರಿದಂತೆ ಮುಂತಾದ ವಿಭಿನ್ನ ಹಂತಗಳನ್ನು ಹೊಂದಿರುತ್ತದೆ. ಪ್ರತಿ ಕುಟುಂಬವು ತಮ್ಮ ಜೀವಮಾನದಲ್ಲಿ ಈ ಎಲ್ಲಾ ಹಂತಗಳನ್ನು ದಾಟಬೇಕಾಗುತ್ತದೆ. ಕೆಲವು ಕುಟುಂಬಗಳು ತಮ್ಮ ಜೀವನದ ಕೆಲವು ಹಂತಗಳಲ್ಲಿ ಸಂತೋಷವಾಗಿರಬಹುದು ಮತ್ತು ಕೆಲವು ಕುಟುಂಬಗಳು ತಮ್ಮ ಜೀವನದ ಕೆಲವು ಹಂತಗಳಲ್ಲಿ ದುಃಖದಿಂದಿರಬಹುದು.

ನಮ್ಮ ಕುಟುಂಬಗಳು ಈ ಕೆಳಗಿನ ಕ್ಷಣಗಳಲ್ಲಿ ಸಂತೋಷವಾಗಿರುತ್ತವೆ:

  • ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದಾಗ
  • ಮಕ್ಕಳಿಗೆ ಸರಿಯಾದ ಕೆಲಸ ಸಿಕ್ಕಾಗ
  • ಮಕ್ಕಳ ಮದುವೆ ನಿಶ್ಚಯವಾದಾಗ
  • ಬಿಸಿನೆಸ್‌ನಲ್ಲಿ ಉತ್ತಮ ಲಾಭ ಗಳಿಸಿದಾಗ
  • ಹೊಸ ಮನೆ /ಕಾರು ಖರೀದಿಸಿದಾಗ
  • ಕುಟುಂಬ ಸದಸ್ಯರೆಲ್ಲ ಒಟ್ಟಿಗೆ ಪ್ರವಾಸಕ್ಕೆ ಹೋದಾಗ

ನಮ್ಮ ಕುಟುಂಬಗಳು ಈ ಕೆಳಗಿನ ಕ್ಷಣಗಳಲ್ಲಿ ದುಃಖದಿಂದಿರುತ್ತವೆ;

  • ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಅಥವಾ ಕಡಿಮೆ ಅಂಕಗಳನ್ನು ಗಳಿಸಿದಾಗ
  • ಮಕ್ಕಳಿಗೆ ಸರಿಯಾದ ಕೆಲಸ ಸಿಗದಿದ್ದಾಗ
  • ಮಕ್ಕಳಿಗೆ ಕಂಕಣ ಭಾಗ್ಯ ಕೂಡಿ ಬಾರದಿದ್ದಾಗ/ ಮದುವೆ ವಿಳಂಬವಾದಾಗ
  • ಬಿಸಿನೆಸ್‌ನಲ್ಲಿ ನಷ್ಟ ಅನುಭವಿಸಿದಾಗ
  • ಮನೆ ನಿರ್ಮಿಸಲು/ ಕಾರು ಖರೀದಿಸಲು ಸಾಧ್ಯವಾಗದಿದ್ದಾಗ
  • ಕುಟುಂಬ ಸದಸ್ಯರ ನಡುವೆ ನಿರಂತರವಾಗಿ ಜಗಳಗಳು ನಡೆದಾಗ
  • ನಾವು ಗಂಭೀರವಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾಗ. ಇತ್ಯಾದಿ

ಈ ಸಮಸ್ಯೆಗಳು ದೀರ್ಘಾವಧಿಯವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಈ ಸಮಸ್ಯೆಗಳು ಕೇವಲ ಒಬ್ಬ ವ್ಯಕ್ತಿಯನ್ನು ತೊಂದರೆಗೊಳಿಸುವುದಲ್ಲದೆ, ಇಡೀ ಕುಟುಂಬದ ಮೇಲೂ ಸಹ ಪರಿಣಾಮ ಬೀರುತ್ತವೆ ಮತ್ತು ಕೆಲವೊಮ್ಮೆ ಈ ಸಮಸ್ಯೆಗಳು ಗಂಭೀರ ಮಟ್ಟಕ್ಕೂ ಹೋಗಬಹುದು.

ಅನೇಕ ವಿದ್ವಾಂಸರು ಮತ್ತು ಸಾಧು-ಸಂತರು “ಸಂತೋಷವು ನಿಮ್ಮೊಳಗೇ ಇದೆ” ಎಂದು ಹೇಳಿದ್ದಾರೆ. ಅವರ ಪ್ರಕಾರ, ಅವರ ಹೇಳಿಕೆ ಸಂಪೂರ್ಣವಾಗಿ ಸರಿಯಾಗಿದೆ., ಏಕೆಂದರೆ ಅವರು ಏಕಾಂಗಿಯಾಗಿ ಅಥವಾ ಆಶ್ರಮಗಳಲ್ಲಿರಲು ಬಯಸುತ್ತಾರೆ. ಆದರೆ ನಾವು ನಮ್ಮ ಕುಟುಂಬಗಳೊಂದಿಗೆ ನಮ್ಮ ಮನೆಗಳಲ್ಲಿ ವಾಸಿಸುತ್ತೇವೆ. ನೌಕರರು ಅಥವಾ ಸಹೋದ್ಯೋಗಿಗಳೊಂದಿಗೆ ಕಚೇರಿಗಳಲ್ಲಿ ಕೆಲಸ ಮಾಡುತ್ತೇವೆ. ಇಂತಹ ಸ್ಥಿತಿಯಲ್ಲಿ ತನ್ನೊಳಗೇ ಸಂತೋಷವನ್ನು ಕಂಡುಕೊಳ್ಳಲು ಸಾಧ್ಯವೇ?

2000ನೇ ಇಸವಿಯಲ್ಲಿ ಮಾನವ ಗುರು ಜಗತ್ತಿನಲ್ಲಿರುವಂತಹ ಪ್ರತಿಯೊಂದು ಕುಟುಂಬಕ್ಕೆ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ರಚಿಸಿದ್ದಾರೆ, ಇದು ಪ್ರಾಚೀನ ಭಾರತೀಯ ಮೌಲ್ಯ ಹಾಗು ಸಂಸ್ಕೃತಿಯನ್ನು ಆಧಾರಿಸಿದ್ದು ವೈಜ್ಞಾನಿಕ ತಳಹದಿಯನ್ನು ಹೊಂದಿದೆ, ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮೀತವಾಗಿರದೇ ಕೇವಲ 9 ರಿಂದ 180 ದಿನಗಳಲ್ಲಿ ಇಡೀ ಕುಟುಂಬದ ಆನಂದಮಯ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶಕ್ತಿ ಹೊಂದಿರುತ್ತಾನೆ, ಆ ಶಕ್ತಿಯೂ ಕೂಡ ಅದರದೇ ಆದ ಕಂಪನದ ತರಂಗವನ್ನು ಹೊಂದಿರುತ್ತೆ, ಅದೇ ರೀತಿಯಲ್ಲಿ ಅ ವ್ಯಕ್ತಿ ವಾಸಿಸುವಂತಹ ಸ್ಥಳ ಅಥವಾ ಉದ್ಯೋಗ ಸ್ಥಳವೂ ಕೂಡ ತನ್ನದೇ ಆದ ಶಕ್ತಿ ಹೊಂದಿರುತ್ತೆ, ಅದು ಸಹಿತ ಅದರದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಇದೇ ರೀತಿಯಲ್ಲಿ ವಿಶ್ವ ಶಕ್ತಿಯೂ ಕೂಡ ತನ್ನದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಯಾವಾಗ ವ್ಯಕ್ತಿಯ ಶಕ್ತಿ ಹಾಗೂ ಅವರು ವಾಸಿಸುವಂತಹ ಸ್ಥಳ ಅವುಗಳ ಕಂಪನ ತರಂಗದ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದಾಗ ವಿಶ್ವಶಕ್ತಿಯು ವ್ಯಕ್ತಿಯ ದೇಹ ಮತ್ತು ಸ್ಥಳದಲ್ಲಿ ಸಂವಹನ ಮಾಡುವುದಕ್ಕೆ ಆರಂಭಿಸುತ್ತೆ, ಅಗ ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳಿಗೆ ವಿಶ್ವಶಕ್ತಿ ಅಗತ್ಯ ಇರುವಂತಹ ಶಕ್ತಿಯನ್ನು ಪೂರೈಸುತ್ತೆ.

ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳು ಮತ್ತು ದೇಹದಲ್ಲಿನ ಅಂಗಗಳು ತಮಗೆ ಸಾಕಾಗುವಷ್ಟು ಶಕ್ತಿಯನ್ನು ಪಡೆದಾಗ ಅವು ಹೆಚ್ಚಿನ ಶಕ್ತಿಯುತ ಮತ್ತು ಸಕ್ರೀಯವಾಗುತ್ತವೆ, ಇದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಢರಾಗುತ್ತಾರೆ.

ಯಾವಾಗ ನೀವು ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೀರೋ ಮುಂದೆ ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನ ಅನುಭವಿಸಲು ಪ್ರಾರಂಭಿಸುತ್ತೀರಿ.

ನಿಮ್ಮ ಸಂತೋಷವು ನಿಮ್ಮ ಆಯ್ಕೆಯಾಗಿದೆ

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube