ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ. ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.
ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತೆ, ಒಂದು ವೇಳೆ ಮದುವೆ ಸರಿಯಾದ ಸಮಯಕ್ಕೆ ನೆರವೇರದೆ ವಿಳಂಬವಾದರೆ ಹುಡುಗ / ಹುಡುಗಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ, ಇಷ್ಟೇ ಅಲ್ಲದೇ ಮದುವೆಯಲ್ಲಿನ ವಿಳಂಬತೆ, ಸಾಮಾಜಿಕವಾಗಿ ಮಕ್ಕಳು ಸೇರಿದ್ದಂತೆ ಕುಟುಂಬದ ಪ್ರತಿಯೊಬ್ಬರಲ್ಲಿ ಸಾಕಷ್ಟು ಒತ್ತಡ ಸೃಷ್ಟಿ ಮಾಡುತ್ತೆ, ಇದು ಕೆಲವೊಮ್ಮೆ ಮಾನಸಿಕ ಒತ್ತಡ, ಖಿನ್ನತೆ ಮತ್ತು ಆತ್ಮ ವಿಶ್ವಾಸ ಕಡಿಮೆಯಾಗುವುದಕ್ಕೆ ಕಾರಣವಾಗುತ್ತೆ.