ದೀಪಾವಳಿ ಹಬ್ಬದ ಆಚರಣೆಗಳ ಹಿಂದಿರುವ ಸತ್ಯ

ದೀಪಾವಳಿ ಹಬ್ಬದ ಆಚರಣೆಗಳ ಹಿಂದಿರುವ ಸತ್ಯ

ದೀಪಾವಳಿ – ದೀಪಗಳ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದನ್ನು, ಕತ್ತಲೆಯ ಮೇಲೆ ಬೆಳಕನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ಸಾಂಕೇತಿಕ ಜಯವನ್ನು ಪ್ರತಿನಿಧಿಸುತ್ತದೆ! ದೀಪಾವಳಿ ಎಂದು ಸರಳವಾಗಿ ಕರೆಯಲ್ಪಡುವ ‘ದೀಪ ಪ್ರತಿಪದ ಉತ್ಸವ’ ಬೆಳಕನ್ನು ಒಂದು ಹಬ್ಬವಾಗಿ ಆಚರಿಸುವ ಆರಂಭವನ್ನು ಸೂಚಿಸುತ್ತದೆ. ದೀಪ ಎಂದರೆ ಬೆಳಕು, ಪ್ರತಿಪದ ಎಂದರೆ ಆರಂಭ ಮತ್ತು ಉತ್ಸವ ಎಂದರೆ ಹಬ್ಬ. ಇದು ಕೇವಲ ಒಂದು ದಿನದ ಹಬ್ಬವಲ್ಲ. ದೀಪಾವಳಿ ಹಬ್ಬವನ್ನು ಆಚರಿಸಲು ವಿವಿಧ ಧರ್ಮಗಳು ವಿವಿಧ ರೀತಿಯ ಐತಿಹಾಸಿಕ ಹಿನ್ನಲೆಗಳ ಕಥೆಗಳನ್ನು ಹೊಂದಿವೆ.

ಹಲವು ಜನರು ದೀಪಾವಳಿಯನ್ನು ಕೇವಲ ಹಿಂದೂ ಹಬ್ಬವೆಂದು ಪರಿಗಣಿಸುತ್ತಾರೆ ಆದರೆ ವೈದಿಕ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಈ ದಿನವನ್ನು ಎಲ್ಲಾ ಧರ್ಮಗಳನ್ನು ಮೀರಿ ಆಚರಿಸಲಾಗುತ್ತದೆ. ವೈದಿಕ ಸಂಪ್ರದಾಯಕ್ಕೆ ಸೇರಿದ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಜೈನರು ಮತ್ತು ಬೌದ್ಧರು ಕೂಡ ತಮ್ಮ ಆಚರಣೆಯನ್ನು ಬೆಂಬಲಿಸಲು ತಮ್ಮದೇ ಆದ ಆಧ್ಯಾತ್ಮಿಕ ಇತಿಹಾಸಗಳನ್ನು ಹೊಂದಿದ್ದಾರೆ. ಈ ದಿನವು ಭಗವಾನ್ ಕೃಷ್ಣನಿಂದ ಕೊಲ್ಲಲ್ಪಟ್ಟ ನಿರ್ದಯ ರಾಕ್ಷಸ ನರಕಾಸುರನ ಮರಣವನ್ನೂ ಸೂಚಿಸುತ್ತದೆ. ಈ ದಿನ ಭಗವಾನ್ ಶ್ರೀ ರಾಮ, ಸೀತಾ ಮತ್ತು ಲಕ್ಷ್ಮಣರು 14 ವರ್ಷಗಳ ವನವಾಸದಿಂದ ಹಿಂದಿರುಗಿದ ದಿನವಾಗಿದೆ, ಮತ್ತು ಅವರ ಆಗಮನದಿಂದಾಗಿ ಸಂತೋಷಗೊಂಡ ಅಯೋಧ್ಯೆಯ ಜನರು ಶ್ರೀ ರಾಮನ ಕುಟುಂಬವನ್ನು ಬೀದಿಗಳುದ್ದಕ್ಕೂ ದೀಪಗಳನ್ನು ಬೆಳಗಿಸುವ ಮೂಲಕ ಸ್ವಾಗತಿಸಿದ್ದರು. ಅಂದಿನಿಂದ ಈ ಸಂದರ್ಭವನ್ನು ದೀಪಾವಳಿ ಎಂದು ಆಚರಿಸಲಾಗುತ್ತದೆ ಮತ್ತು ಜನರು ಅಂದಿನಿಂದ ಈ ಹಬ್ಬವನ್ನು ಆಚರಿಸಲು ದೀಪಗಳನ್ನು ಬೆಳಗಿಸಲು ಪ್ರಾರಂಭಿಸಿದರು.

ಈ ಹಬ್ಬದ ಆಚರಣೆಯ ಇತಿಹಾಸವನ್ನು ಬದಿಗಿಟ್ಟು, ದೀಪಾವಳಿಯನ್ನು ಆಚರಿಸಲು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಯೋಚಿಸೋಣ. ಎಷ್ಟು ಜನರು ಈ ದೀಪಾವಳಿಯನ್ನು ಸಂತೋಷದಿಂದ ಆಚರಿಸುತ್ತಾರೆ?

ಕೋವಿಡ್ -19 ಸಾಂಕ್ರಾಮಿಕ ರೋಗವು 8 ಕೋಟಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ಈ ಪ್ರಸ್ತುತ ಪರಿಸ್ಥಿತಿಯಲ್ಲಿ, “2020 ರ ದೀಪಾವಳಿ” ಆಚರಿಸಲು ನಾವು ಎಲ್ಲಿ ನಿಂತಿರುವೆವು ? ಈ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಹಾಳುಮಾಡಿದೆ. ವ್ಯವಹಾರಗಳು/ಬಿಸಿನೆಸ್‌ಗಳು ಭಾರಿ ಪ್ರಮಾಣದಲ್ಲಿ ನಷ್ಟವನ್ನು ಎದುರಿಸುತ್ತಿವೆ ಮತ್ತು ಅವನತಿಯನ್ನು ಅನುಭವಿಸುತ್ತಿವೆ.

ಈಗಿನ ಪ್ರಸ್ತುತ ಪರಿಸ್ಥಿತಿಯು ಕೇವಲ ಒಬ್ಬ ವ್ಯಕ್ತಿಗೆ ಮಾತ್ರವಲ್ಲ ಇಡೀ ಕುಟುಂಬದ ಮೇಲೆ ತನ್ನ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ಅಂತಹ ಕುಟುಂಬಗಳು ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ? ಇಂತಹ ಕಠಿಣ ಸಂದರ್ಭಗಳಲ್ಲಿ ಸಹ ಭಾರತೀಯರು ಇತರರಿಂದ ಹಣವನ್ನು ಸಾಲ ಪಡೆದು ದೀಪಾವಳಿಯನ್ನು ಆಚರಿಸುತ್ತಾರೆ. ತಾವು ಪೂಜೆ ಮತ್ತು ಆಚರಣೆಗಳನ್ನು ಮಾಡದಿದ್ದರೆ, ದೇವರು ಮತ್ತು ದೇವತೆಗಳು ಅವರೊಂದಿಗೆ ಅಸಮಾಧಾನಗೊಳ್ಳಬಹುದು ಎಂಬ ಭಯ ಅವರನ್ನು ಕಾಡುತ್ತಿರಬಹುದು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾವು ಮನೆ ಮತ್ತು ಕಾರ್ಯಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದೇಕೆ?

 Why do we do a deep cleaning of the house/workplace during Diwali

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮನೆ ಮತ್ತು ಕಾರ್ಯಸ್ಥಳಗಳನ್ನು ಸ್ವಚ್ಛಗೊಳಿಸುತ್ತೇವೆ ಮತ್ತು ಅನಗತ್ಯ ವಸ್ತುಗಳನ್ನು ಹೊರಗೆಸೆಯುತ್ತೇವೆ.

ಕೆಟ್ಟು ಹೋದ ಎಲೆಕ್ಟ್ರಾನಿಕ್‌ ವಸ್ತುಗಳಾದ ಗಡಿಯಾರ, ಟೆಲಿವಿಷನ್‌, ಮಿಕ್ಸರ್‌, ಫ್ಯಾನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಅಥವಾ ತೂಗು ಹಾಕುವ ಲ್ಯಾಂಪ್‌ಗಳಂತಹ ಮುರಿದ ವಸ್ತುಗಳು, ತಟ್ಟೆಗಳಂತಹ ಗಾಜಿನ ವಸ್ತುಗಳು, ಫೋಟೊ ಫ್ರೇಮ್‌ಗಳು, ಹೂ ಬುಟ್ಟಿಗಳು, ಪೀಠೋಪಕರಣಗಳು ಸೇರಿದಂತೆ ಉಪಯೋಗಕ್ಕೆ ಬಾರದ ಮುಂತಾದ ವಸ್ತುಗಳನ್ನು ಮನೆ ಅಥವಾ ಕಾರ್ಯಸ್ಥಳಗಳಿಂದ ತೆಗೆದು ಹಾಕಬೇಕು. ಈ ಮುರಿದು ಹೋದ ಅಥವಾ ಉಪಯೋಗಕ್ಕೆ ಬಾರದ ವಸ್ತುಗಳು ಮನೆಯಲ್ಲಿದ್ದಲ್ಲಿ ಮನೆಯಲ್ಲಿ ವಿಶ್ವಶಕ್ತಿ ನೆಲೆಸಲು ಅಡ್ಡಪಡಿಸಬಹುದು.

ಈ ಅನಗತ್ಯವಾದ ವಸ್ತುಗಳು, ಮನೆ ಮತ್ತು ಕಾರ್ಯಸ್ಥಳಗಳಲ್ಲಿ ವಿಶ್ವಶಕ್ತಿಯ ಹರಿವನ್ನು ತಡೆಯುತ್ತವೆ. ನಾವು ಈ ಅನಗತ್ಯವಾದ ವಸ್ತುಗಳನ್ನು ತೆಗೆದು ಹಾಕಿದಾಗ ವಿಶ್ವಶಕ್ತಿಯು ಮನೆ/ಕಾರ್ಯಸ್ಥಳದಲ್ಲಿ ಸರಾಗವಾಗಿ ಹರಿಯುತ್ತದೆ. ಇದರಿಂದಾಗಿ ಮನೆಯಲ್ಲಿನ ಪ್ರತಿಯೊಬ್ಬ ಸದಸ್ಯರು ಮನೆಯೊಳಗೆ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುತ್ತಾರೆ.

ದೀಪಾವಳಿ ಹಬ್ಬದ ಸಮಯದಲ್ಲಿ ನಾವು ನಮ್ಮ ಮನೆಗೆ ಸುಣ್ಣ-ಬಣ್ಣಗಳನ್ನು ಹಚ್ಚುವುದೇಕೆ ?

ಗೋಡೆಗಳ ಮೇಲೆ ಬಿಡಿಸಿದ ಚಿತ್ರಗಳು ಮುಸುಕಾಗಿದ್ದರೆ ಅಥವಾ ಗೋಡೆಯ ಮೇಲೆ ಒಡಕುಗಳು ಮೂಡಿದ್ದರೆ/ ಗೋಡೆಯ ಬಣ್ಣ ಮಾಸಿದ್ದರೆ ಅದು ಆ ಪ್ರದೇಶದ ಸುತ್ತಮುತ್ತ ಖುಣಾತ್ಮಕ ವಾತಾವರಣವನ್ನು ಸೃಷ್ಠಿಸುತ್ತದೆ. ಮನೆಗೆ ಸುಣ್ಣ ಅಥವಾ ಬಣ್ಣಗಳನ್ನು ಹಚ್ಚುವುದರಿಂದ ಮನೆಯೊಳಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಠಿಸಲು ಸಹಾಯ ಮಾಡುತ್ತದೆ.

ಮನೆಗೆ ಸುಣ್ಣ ಬಣ್ಣಗಳನ್ನು ಹಚ್ಚುವುದರಿಂದ ಕೀಟಗಳನ್ನು ಕೊಲ್ಲಲು ಸಹಕಾರಿಯಾಗುತ್ತದೆ. ದೀಪಾವಳಿ ಹಬ್ಬವು ಚಳಿಗಾಲದಲ್ಲಿ ಬರುತ್ತದೆ ಮತ್ತು ಚಳಿಗಾಲದಲ್ಲಿಯೇ ಕೀಟಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಮನೆಗೆ ಸುಣ್ಣ ಅಥವಾ ಬಣ್ಣ ಹಚ್ಚುವುದರಿಂದ ಅದು ಹುಳು ಹುಪ್ಪಡಿಗಳು ಮತ್ತು ಕೀಟಗಳನ್ನು ದೂರವಿರಿಸುತ್ತದೆ.

Painting

ದೀಪಾವಳಿ ಹಬ್ಬದಲ್ಲಿ ನಾವು ಅಲಂಕೃತವಾಗಿ ಪೂಜೆಗಳನ್ನು ಮಾಡುವುದೇಕೆ?

God

ದೀಪಾವಳಿಯ ಸಮಯದಲ್ಲಿ, ನಾವು ಲಕ್ಷ್ಮಿ ದೇವಿಗೆ ಕನಿಷ್ಠ 3 ರಿಂದ 4 ದಿನಗಳವರೆಗೆ ಪೂಜೆ ಮತ್ತು ಇತರ ಆಚರಣೆಗಳನ್ನು ಮಾಡುತ್ತೇವೆ ಮತ್ತು ಇಡೀ ಮನೆ ಹಾಗೂ ಪೂಜಾ ಕೊಠಡಿಯನ್ನು ಹೂವುಗಳಿಂದ ಅಲಂಕರಿಸುತ್ತೇವೆ. ಮನೆಯ ಮುಖ್ಯದ್ವಾರದ ಹೊರಗೆ ನಾವು 5 ದಿನಗಳ ಕಾಲ ಆಕಾಶ ಬುಟ್ಟಿ ಮತ್ತು ದೀಪಗಳನ್ನು ಬೆಳಗಿಸುತ್ತೇವೆ ಮತ್ತು ಮಂತ್ರಗಳನ್ನು ಪಠಿಸುತ್ತೇವೆ – ಇವೆಲ್ಲ ಆಚರಣೆಗಳು ಮನೆಯಲ್ಲಿ ವಿಶ್ವಶಕ್ತಿಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ನಾವು ದೀಪಾವಳಿ ಹಬ್ಬದಂದು ಸಿಹಿ ಖಾದ್ಯಗಳು, ತಿನಿಸುಗಳನ್ನು ತಯಾರಿಸುವುದು ಮತ್ತು ಹೊಸ ಬಟ್ಟೆಗಳನ್ನು ಧರಿಸುವುದೇಕೆ?

ದೀಪಗಳ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ನಾವು ಎಲ್ಲಾ ಬಗೆಯ, ಬಾಯಲ್ಲಿ ನೀರೂರಿಸುವಂತಹ ಸಾಂಪ್ರದಾಯಿಕ ಖಾದ್ಯಗಳನ್ನು ಮತ್ತು ಬಗೆ ಬಗೆಯ ತಿನಿಸುಗಳನ್ನು ತಯಾರಿಸುತ್ತೇವೆ. ದೀಪಾವಳಿಯ ಈ ಸಿಹಿ ಖಾದ್ಯ ಮತ್ತು ತಿನಿಸುಗಳನ್ನು ಪೂಜೆಗಳಲ್ಲಿ ಬಳಸಲಾಗುತ್ತದೆ ಮತ್ತು ನೆರೆಹೊರೆಯವರು ಹಾಗೂ ಆತ್ಮಿಯರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ದೀಪಾವಳಿಯಂದು ಉಡುಗೊರೆಗಳು, ಸಿಹಿತಿಂಡಿಗಳು ಮತ್ತು ಪರಸ್ಪರರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು ಮುಂತಾದವರ ನಡುವೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ವ್ಯವಹಾರಗಳಲ್ಲಿ ದೀರ್ಘಕಾಲೀನ ಒಡನಾಟಕ್ಕೂ ಸಹಾಯವಾಗುತ್ತದೆ.

Sweets

ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸುವುದರಿಂದ ಅದು ನಮಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಮತ್ತು ನಮ್ಮೊಳಗೆ ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತದೆ.

ನಾವು ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಮನೆಯ ಮುಖ್ಯದ್ವಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದೇಕೆ?

Door

ಮನೆಯ ಮುಖ್ಯದ್ವಾರವನ್ನು ಯಾವಾಗಲೂ ಹೂವುಗಳು, ಮಾವಿನ ಎಲೆಗಳು ಮತ್ತು ಸಣ್ಣ ಬಾಳೆ ಕಂಬಗಳು, ದೀಪಗಳು ಹಾಗೂ ದೀಪಾವಳಿಯ ಲೈಟುಗಳು ಮತ್ತು ಹಲವಾರು ವಸ್ತುಗಳಿಂದ ಅಲಂಕರಿಸಲಾಗುತ್ತದೆ. ನಾವು ಮನೆಯ ಮುಖ್ಯದ್ವಾರದ ಮುಂದೆ ಹಲವಾರು ಬಗೆಯ ರಂಗೋಲಿ ಮತ್ತು ಲಕ್ಷ್ಮೀದೇವಿಯ ಹೆಜ್ಜೆ ಗುರುತುಗಳನ್ನು ಬಿಡಿಸಿರುತ್ತೇವೆ. ಇದು, ನಮ್ಮ ಮನೆಗಳಿಗೆ ಪ್ರವೇಶಿಸಿ ಸಮೃದ್ಧಿ, ಸಂಪತ್ತು ಮತ್ತು ಸಂತೋಷವನ್ನು ಕರುಣಿಸಲು ಲಕ್ಷ್ಮಿ ದೇವಿಗೆ ನಾವು ನೀಡುವ ಆಹ್ವಾನವಾಗಿದೆ.

“ದೇವರು ಅಥವಾ ದೇವತೆಯನ್ನು ಎಂದಾದರು ನೋಡಿದ್ದೀರಾ?” ಎಂದು ನೀವು ಕೇಳಿದರೆ, ಸ್ಪಷ್ಟವಾಗಿ “ಇಲ್ಲ” ಎಂಬ ಉತ್ತರ ಬರುತ್ತದೆ. ಆದರೆ ನೀವು “ದೇವರು ಅಥವಾ ದೇವತೆ ಎಲ್ಲಿದ್ದಾನೆ?” ಎಂದು ಕೇಳಿದರೆ, ಎಲ್ಲಡೆ ಇದ್ದಾನೆ ಎಂಬ ಉತ್ತರ ಎಲ್ಲರು ಕೊಡುತ್ತಾರೆ. ದೇವರು /ದೇವತೆ ಅದೃಶ್ಯರಾಗಿರುತ್ತಾರೆ, ಆದರೆ ಎಲ್ಲಡೆ ನೆಲೆಸಿರುತ್ತಾರೆ. ಅದೇ ರೀತಿ ಬ್ರಹ್ಮಾಂಡದಲ್ಲಿ ನಮಗೆ ಕಾಣಿಸದ ಒಂದು ಅದೃಶ್ಯ ಜೀವಶಕ್ತಿ ಇದೆ ಮತ್ತು ಅದು ಎಲ್ಲೆಡೆ ನೆಲೆಸಿರುತ್ತದೆ, ಅದುವೇ ವಿಶ್ವಶಕ್ತಿ.

ದೇವರು/ದೇವತೆ ಮತ್ತು ವಿಶ್ವಶಕ್ತಿ ಎರಡೂ ಅಗೋಚರವಾಗಿ ಮತ್ತು ಎಲ್ಲೆಡೆ ನೆಲೆಸಿರುವಾಗ, ನಾವು ದೇವರು/ದೇವತೆಯರನ್ನು ವಿಶ್ವಶಕ್ತಿ ಎಂದು ಏಕೆ ಕರೆಯಬಾರದು? ನಾವು ಲಕ್ಷ್ಮಿ ದೇವಿಯನ್ನು ನಮ್ಮ ಮನೆಗಳಿಗೆ ಆಹ್ವಾನಿಸುತ್ತಿರುವಾಗ, ನಾವು ನಮ್ಮ ಮನೆಗಳಿಗೆ ವಿಶ್ವಶಕ್ತಿಯನ್ನು ಆಹ್ವಾನಿಸುತ್ತಿರುತ್ತೇವೆ.

ಪ್ರತಿಯೊಂದು ಧರ್ಮದಲ್ಲೂ ಜನರು ತಮ್ಮದೇ ಆದ ಸರ್ವೋಚ್ಚ ದೇವರನ್ನು ಹೊಂದಿದ್ದಾರೆ – ಹಿಂದೂಗಳು ಶಿವನನ್ನು ಹೊಂದಿದ್ದರೆ, ಮುಸ್ಲಿಮರು ಅಲ್ಲಾಹನನ್ನು ಹೊಂದಿದ್ದಾರೆ ಮತ್ತು ಕ್ರಿಶ್ಚಿಯನ್ನರು ಯೇಸುವನ್ನು ಹೊಂದಿದ್ದಾರೆ. ಹೀಗೆ ವಿಶ್ವವು ಸಹ ತನ್ನ ಸರ್ವೋಚ್ಚ ದೇವರನ್ನು ಹೊಂದಿದೆ. ಅದುವೆ ವಿಶ್ವಶಕ್ತಿ . ಹೀಗಾಗಿ ವಿಶ್ವಶಕ್ತಿ ಬ್ರಹ್ಮಾಂಡದ ಸರ್ವೋಚ್ಚ ದೇವರಾಗಿದೆ. ಈ ವಿಶ್ವಶಕ್ತಿಯೂ ನಿಮ್ಮ ಧರ್ಮವನ್ನು ಪರಿಗಣಿಸದೆ ಜೀವನದಲ್ಲಿ ನಿಮಗೆ ಬೇಕಾದುದನ್ನು ನೀಡುತ್ತದೆ.

ಹಬ್ಬವನ್ನು ಆಚರಿಸುವುದು ಮತ್ತು ದೇವರು/ದೇವತೆ ಅಥವಾ ವಿಶ್ವಶಕ್ತಿಯನ್ನು ನಮ್ಮ ಮನೆಗಳಿಗೆ ಆಹ್ವಾನಿಸುವುದರಿಂದ ನಮಗೆ ಜೀವನದಲ್ಲಿ ಬೇಕಾದುದನ್ನು ಪಡೆಯಲಾಗುವುದಿಲ್ಲ. ಹಬ್ಬ ಹರಿದಿನಗಳ ಆಚರಣೆಯಿಂದ ಕೇವಲ 15 ದಿನಗಳು ಅಥವಾ ಒಂದು ತಿಂಗಳು ಮಾತ್ರ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸುತ್ತಮುತ್ತಲಿನ ಪ್ರದೇಶಗಳು ನಾವು ನಮ್ಮ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳವಾಗಿದೆ. ನಾವು ಸಾಮಾನ್ಯವಾಗಿ ನಮ್ಮ ಮನೆ / ಕೆಲಸದ ಸ್ಥಳದಲ್ಲಿ ಗರಿಷ್ಠ ಸಮಯವನ್ನು ಕಳೆಯುತ್ತೇವೆ. 24 ಗಂಟೆಗಳಲ್ಲಿ, ನಾವು ಈ ಎರಡೂ ಸ್ಥಳಗಳಲ್ಲಿ ಸುಮಾರು 20 ಗಂಟೆಗಳು ಕಳೆಯುತ್ತೇವೆ.

2000ನೇ ಇಸವಿಯಲ್ಲಿ ಮಾನವ ಗುರು ಜಗತ್ತಿನಲ್ಲಿರುವಂತಹ ಪ್ರತಿಯೊಂದು ಕುಟುಂಬಕ್ಕೆ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ರಚಿಸಿದ್ದಾರೆ, ಇದು ಪ್ರಾಚೀನ ಭಾರತೀಯ ಮೌಲ್ಯ ಹಾಗು ಸಂಸ್ಕೃತಿಯನ್ನು ಆಧಾರಿಸಿದ್ದು ವೈಜ್ಞಾನಿಕ ತಳಹದಿಯನ್ನು ಹೊಂದಿದೆ, ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮೀತವಾಗಿರದೇ ಕೇವಲ 9 ರಿಂದ 180 ದಿನಗಳಲ್ಲಿ ಇಡೀ ಕುಟುಂಬದ ಆನಂದಮಯ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಶಕ್ತಿ ಹೊಂದಿರುತ್ತಾನೆ, ಆ ಶಕ್ತಿಯೂ ಕೂಡ ಅದರದೇ ಆದ ಕಂಪನದ ತರಂಗವನ್ನು ಹೊಂದಿರುತ್ತೆ, ಅದೇ ರೀತಿಯಲ್ಲಿ ಅ ವ್ಯಕ್ತಿ ವಾಸಿಸುವಂತಹ ಸ್ಥಳ ಅಥವಾ ಉದ್ಯೋಗ ಸ್ಥಳವೂ ಕೂಡ ತನ್ನದೇ ಆದ ಶಕ್ತಿ ಹೊಂದಿರುತ್ತೆ, ಅದು ಸಹಿತ ಅದರದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಇದೇ ರೀತಿಯಲ್ಲಿ ವಿಶ್ವ ಶಕ್ತಿಯೂ ಕೂಡ ತನ್ನದೇ ಆದ ಕಂಪನ ತರಂಗವನ್ನು ಹೊಂದಿರುತ್ತೆ, ಯಾವಾಗ ವ್ಯಕ್ತಿಯ ಶಕ್ತಿ ಹಾಗೂ ಅವರು ವಾಸಿಸುವಂತಹ ಸ್ಥಳ ಅವುಗಳ ಕಂಪನ ತರಂಗದ ಮೂಲಕ ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸಿದಾಗ ವಿಶ್ವಶಕ್ತಿಯು ವ್ಯಕ್ತಿಯ ದೇಹ ಮತ್ತು ಸ್ಥಳದಲ್ಲಿ ಸಂವಹನ ಮಾಡುವುದಕ್ಕೆ ಆರಂಭಿಸುತ್ತೆ, ಅಗ ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳಿಗೆ ವಿಶ್ವಶಕ್ತಿ ಅಗತ್ಯ ಇರುವಂತಹ ಶಕ್ತಿಯನ್ನು ಪೂರೈಸುತ್ತೆ.

ದೇಹದಲ್ಲಿ ಟ್ರೀಲಿಯನ್‌ಗಟ್ಟಲೇ ಇರುವಂತಹ ಜೀವಕೋಶಗಳು ಮತ್ತು ದೇಹದಲ್ಲಿನ ಅಂಗಗಳು ತಮಗೆ ಸಾಕಾಗುವಷ್ಟು ಶಕ್ತಿಯನ್ನು ಪಡೆದಾಗ ಅವು ಹೆಚ್ಚಿನ ಶಕ್ತಿಯುತ ಮತ್ತು ಸಕ್ರೀಯವಾಗುತ್ತವೆ, ಇದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಸಧೃಢರಾಗುತ್ತಾರೆ.

ಯಾವಾಗ ನೀವು ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತೀರೋ ಮುಂದೆ ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನ ಅನುಭವಿಸಲು ಪ್ರಾರಂಭಿಸುತ್ತೀರಿ.

ಮಾನವ ಗುರು

ಮಾನವ ಗುರು

ತಮ್ಮ ದಿವ್ಯ ಜ್ಞಾನದ ಮೂಲಕ ಲಕ್ಷಾಂತರ ಕುಟುಂಬಗಳ ಜೀವನವನ್ನು ಕೇವಲ 9 ರಿಂದ 180 ದಿನಗಳಲ್ಲಿ ಬದಲಾಯಿಸಿದ್ದಾರೆ.

Facebook Twitter Instagram Linkedin Youtube