ಜನ್ಮ ಭೂಮಿಯಲ್ಲಿ ಗುರೂಜಿಯವರು ನಡೆದು ಬಂದ ದಾರಿ

ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ದಿ ಶ್ರೀ ವಿರುಪಾಕ್ಷಪ್ಪ ಮತ್ತು ನೀಲಮ್ಮ ಅಂಗಡಿ ಇವರ ಪುಣ್ಯ ಗರ್ಭದಲ್ಲಿ ಗುರೂಜಿಯವರು ಜನಿಸಿದರು .ಬಾಲ್ಯಾವಸ್ಥೆಯಿಂದಲೂ ದೇಶಕ್ಕಾಗಿ ಯಾವುದಾದರೂ ರೀತಿಯಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳ ಬೇಕೆಂಬುದು ಅವರ ಬಯಕೆಯಾಗಿತ್ತು.

ಮಾನವ ಗುರು ಅವರು ಬಾಲ್ಯದಲ್ಲಿದ್ದಾಗ ಅವರು ವಾಸಿಸುವ ಬಡಾವಣೆಯಲ್ಲಿ ಒಂದು ದೇವಸ್ಥಾನವಿತ್ತು. ಆ ದೇವಾಲಯದ ನಿರ್ವಹಣೆ ಮಾಡಲು ಆ ಬಡಾವಣೆಯ ಎಲ್ಲಾ ಮನೆಗಳಿಂದ ಹಣವನ್ನು ಸಂಗ್ರಹಿಸಬೇಕಾಗಿತ್ತು. ಗುರೂಜಿಯವರು ವಾಸವಾಗಿದ್ದ ಆ ಬಡಾವಣೆಯಲ್ಲಿ ಸುಮಾರು 50 ರಿಂದ 60 ಮನೆಗಳಿದ್ದವು. ಆ ನಗರದ ಯಾವ ವ್ಯಕ್ತಿಯು ಕೂಡ ಮುಂದೆ ಬಂದು ದೇವಸ್ಥಾನದ ನಿರ್ವಹಣೆಗೆ ಹಣ ಸಂಗ್ರಹಿಸಲು ಸಿದ್ದರಿರಲಿಲ್ಲ. ಆಗ ಗುರೂಜಿಯವರು ಮುಂದೆ ಬಂದು ತನ್ನ ಸ್ನೇಹಿತನ ಜೊತೆಗೂಡಿ ದೇವಸ್ಥಾನದ ನಿರ್ವಹಣೆಗಾಗಿ ಹಣ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಪ್ರತಿದಿನ ತಮ್ಮ ಶಾಲೆ ಬಿಟ್ಟ ತಕ್ಷಣ ಮನೆ ಮನೆಗಳಿಗೆ ತೆರಳಿ ಗುರೂಜಿಯವರು ದೇವಸ್ಥಾನಕ್ಕಾಗಿ ಹಣ ಸಂಗ್ರಹಣೆ ಮಾಡಲು ಶುರು ಮಾಡುತ್ತಾರೆ. ಗುರೂಜಿಯವರ ಈ ಕಾರ್ಯ ದೇವಾಲಯದ ಧನಸಹಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಗುರೂಜಿಯವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಎಂತಹ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಎಂಬುದು ಈ ಘಟನೆಯಿಂದ ನಮಗೆ ತಿಳಿದು ಬರುತ್ತದೆ.

ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಅರ್ಪಿಸುವ ಹುರುಪು ಮತ್ತು ಉತ್ಸಾಹದಿಂದ ಮಾನವ ಗುರೂಜಿಯವರು ರಾಷ್ಟ್ರ ಸೇವೆಗಾಗಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬ ಗೊಂದಲದಲ್ಲಿರುತ್ತಾರೆ. ಇದೇ ಸಮಯದಲ್ಲಿ ಗುರೂಜಿಯವರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದಾಗ ಯೋಧನಾಗಿ ದೇಶ ಕಾಯಬೇಕು ಎಂದು ತಿರ್ಮಾನಕ್ಕೆ ಬಂದು, ಭಾರತೀಯ ಸೇನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಆದರೆ ದೈಹಿಕ ಪರೀಕ್ಷೆಯ ಸಮಯದಲ್ಲಿ ಇವರನ್ನು ತಿರಸ್ಕರಿಸಿದಾಗ ಗುರೂಜಿಯವರು ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ಗುರೂಜಿಯವರ ದೇಹದ ತೂಕ ಕಡಿಮೆ ಇದೆ ಎಂಬ ಕಾರಣಕ್ಕೆ ಅವರನ್ನು ಮಿಲಿಟರಿ ಆಯ್ಕೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಆ ಸಂದರ್ಭದಲ್ಲಿ ಗುರೂಜಿಯವರು ತಮ್ಮ ಅಸಮಾಧಾನವನ್ನು ಈ ರೀತಿಯಾಗಿ ಹೊರಹಾಕುತ್ತಾರೆ, “ರಾಷ್ಟ್ರಕ್ಕಾಗಿ ನಾನು ನನ್ನ ಜೀವನವನ್ನು ಅರ್ಪಿಸಲು ಇಷ್ಟೊಂದು ಉತ್ಸುಕನಾಗಿರುವಾಗ, ನನ್ನನ್ನು ಏಕೆ ತಿರಸ್ಕರಿಸಲಾಯಿತು?” ಈ ಘಟನೆಯಿಂದಾಗಿ ಅವರಿಗೆ ತುಂಬಾ ಆಶ್ಚರ್ಯವಾಗಿರುತ್ತದೆ.

ಈ ತಿರಸ್ಕಾರದಿಂದ ಗುರೂಜಿಯವರು ಎದೆಗುಂದಲಿಲ್ಲ. ತಮ್ಮ ಕನಸುಗಳಿಂದ ಎಂದಿಗೂ ಕೂಡ ವಿಮುಖರಾಗಲಿಲ್ಲ. ದೃಢನಿಶ್ಚಯ ಮತ್ತು ಸಮರ್ಪಣಾ ಮನೋಭಾವದಿಂದ ಗುರೂಜಿಯವರು ತಮ್ಮ ಮುಂದಿನ ಪಯಣವನ್ನು ಆರಂಭಿಸುತ್ತಾರೆ. ತಮ್ಮ ಶಿಕ್ಷಣವನ್ನು ಮುಂದುವರೆಸಿದ ಗುರೂಜಿಯವರು ಕರ್ನಾಟಕದ ಬಾಗಲಕೋಟೆಯಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಾರೆ. ಗುರೂಜಿಯವರು ಯಾವಾಗಲೂ ತಮ್ಮ ಶಿಕ್ಷಕರ ಬಗ್ಗೆ ಮತ್ತು ಶೈಕ್ಷಣಿಕ ಜೀವನದುದ್ದಕ್ಕೂ ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಅಪಾರವಾದ ಕೃತಜ್ಞತಾ ಮನೋಭಾವವನ್ನು ಹೊಂದಿದ್ದರು, ಈಗಲೂ ಕೂಡ ಅದೇ ಮನೋಭಾವವನ್ನು ಗುರೂಜಿಯವರು ಮುಂದುವರೆಸಿಕೊಂಡು ಬಂದಿದ್ದಾರೆ.

“ಕರ್ಮಭೂಮಿಯಲ್ಲಿ” ಗುರೂಜಿಯವರು ನಡೆದು ಬಂದ ಹಾದಿ

ಕರ್ಮಭೂಮಿಯಲ್ಲಿ ಪ್ರಯಾಣ

ಗುರೂಜಿಯವರು ಮುಂದೊಂದು ದಿನ ಮುಂಬೈ ನಗರ ತಮ್ಮ ಕರ್ಮಭೂಮಿಯಾಗುತ್ತದೆ ಎಂದು ಎಂದಿಗೂ ಕೂಡ ಊಹಿಸಿರಲಿಲ್ಲ. ಗುರೂಜಿಯವರು ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮುಂಬೈ ನಗರದಲ್ಲಿ ವಾಸವಾಗಿದ್ದ ಅವರ ಸಹೋದರ ಸಂಬಂಧಿಯೊಬ್ಬರು ಅವರನ್ನು ಮುಂಬೈನಲ್ಲಿ ವೃತ್ತಿ ಜೀವನವನ್ನು ಆರಂಭಿಸುವಂತೆ ಒತ್ತಾಯಿಸುತ್ತಾರೆ. ಅಷ್ಟೇ ಅಲ್ಲದೆ ಗುರೂಜಿಯವರ ತಂದೆ ಮತ್ತು ಸಹೋದರರ ಬಳಿ ಗುರೂಜಿಯವರನ್ನು ಕನಸುಗಳ ಮಹಾನಗರ ಮುಂಬೈಗೆ ಕಳುಹಿಸುವಂತೆ ಮನವೊಲಿಸುತ್ತಾರೆ. ಆಗ ಅವರ ಕುಟುಂಬ ಸದಸ್ಯರು ಕೂಡ ಗುರೂಜಿಯವರನ್ನು ಮುಂಬೈ ನಗರಕ್ಕೆ ಕಳುಹಿಸಲು ನಿರ್ಧರಿಸುತ್ತಾರೆ. ಆ ಹೊಸ ನಗರದ ಸ್ಥಳಿಯ ಭಾಷೆಯನ್ನು ಚೆನ್ನಾಗಿ ತಿಳಿದುಕೊಂಡಿರದ ಕಾರಣ ಮಾನವ ಗುರೂಜಿಯವರು, ಮನೆಯವರ ನಿರ್ಧಾರದಿಂದ ಆತಂಕಕ್ಕೊಳಗಾಗುತ್ತಾರೆ ಮತ್ತು ಮುಂಬೈನಲ್ಲಿ ತಾವು ಹೇಗೆ ಜೀವನ ನಿರ್ವಹಿಸುವುದು? ಎಂದು ಯೋಚಿಸತೊಡಗುತ್ತಾರೆ.

ಕೊನೆಗೂ ಅವರು ಸಣ್ಣ ಮೊತ್ತದ ಹಣವನ್ನು ಜೇಬಿನಲ್ಲಿಟ್ಟುಕೊಂಡು, ದೊಡ್ಡ-ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಮುಂಬೈ ನಗರಕ್ಕೆ ಬರುತ್ತಾರೆ. ಒಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಅವರ ಸಮರ್ಪಣಾಭಾವ, ಪ್ರಾಮಾಣಿಕತೆ ಮತ್ತು ಕಠಿಣ ಪರೀಶ್ರಮದಿಂದಾಗಿ ಅವರು ಬಹು ಬೇಗನೆ ಕಂಪನಿಯಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಅಷ್ಟೇ ಅಲ್ಲದೆ ಸ್ವತಂತ್ರ್ಯವಾಗಿ ಯೋಜನೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗುತ್ತದೆ. ತಮಗೆ ವಹಿಸಿಕೊಟ್ಟಿದ್ದ ಯೋಜನೆಯನ್ನು ಎರೆಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಗುರೂಜಿಯವರು ಆ ಕಂಪನಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ.

ಅಪಾರವಾದ ಅನುಭವ ಮತ್ತು ದೃಢವಾದ ಆತ್ಮವಿಶ್ವಾಸದಿಂದ ಅವರು ತಮ್ಮದೆ ಆದ ನಿರ್ಮಾಣ ಸಂಸ್ಥೆಯನ್ನು ಯಶಸ್ವಿಯಾಗಿ ಆರಂಭಿಸುತ್ತಾರೆ ಮತ್ತು ಕೆಲ ದಿನಗಳಲ್ಲಿಯೇ ಅಭಿವೃದ್ಧಿ, ಸಮೃದ್ಧಿ, ಬೆಳವಣಿಗೆ ಮತ್ತು ಘನತೆಯನ್ನು ತಮ್ಮ ಹೊಸ ಬಿಸಿನೆಸ್‌ನಲ್ಲಿ ಕಂಡು ಕೊಳ್ಳುತ್ತಾರೆ. ಹಣ ಗಳಿಸುವುದಕ್ಕಿಂತ ಸಮಾಜಕ್ಕೆ ಮರಳಿ ಕೊಡುಗೆ ನೀಡುವುದು ಮಹತ್ತರ ಕಾರ್ಯ ಎಂಬ ಅರಿವನ್ನು, ಅವರ ಅಂತಃಪ್ರಜ್ಞೆಯು ಅವರಿಗೆ ಮಾರ್ಗದರ್ಶನ ನೀಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುರೂಜಿಯವರು ಅವರ ಸ್ನೇಹಿತರ ಜೊತೆಗೂಡಿ “ಶರಣ ಸಂಕುಲ” ಎಂಬ ಚಾರಿಟೇಬಲ್‌ ಟ್ರಸ್ಟ್‌ನ್ನು ಆರಂಭಿಸಿ, ಅವರೇ ಆ ಟ್ರಸ್ಟ್‌ನ ಸ್ಥಾಪಕ ಟ್ರಸ್ಟೀಯಾಗುತ್ತಾರೆ. ಈ ಟ್ರಸ್ಟ್‌ ಸಮಾಜದಲ್ಲಿನ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದೆ.

ಗುರೂಜಿಯವರ ಜೀವನದಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಆದರೆ 1998ನೇ ಇಸವಿಯಲ್ಲಿ ಒಂದು ದಿನ ತಮ್ಮ ಬಿಸಿನೆಸ್‌ನಲ್ಲಿ ಗುರೂಜಿಯವರಿಗೆ 15 ಲಕ್ಷ ರೂಪಾಯಿಗಳ ಮೋಸವಾಗುತ್ತದೆ. ಮುಂದೆ ಕೆಲವೇ ದಿನಗಳ ಅಂತರದಲ್ಲಿ ಅವರಿಗೆ ಬಿಸಿನೆಸ್‌ನಲ್ಲಿ ಮತ್ತೆ 20 ಲಕ್ಷ ರೂಪಾಯಿಗಳ ಮೋಸವಾಗುತ್ತದೆ. ಆಗ ಗುರೂಜಿ ಅವರು ವಿಷಮ ಪರಿಸ್ಥಿತಿ ತಲುಪುತ್ತಾರೆ. ಆ ಸಮಯದಲ್ಲಿ ಅಷ್ಟು ಹಣ ದೊಡ್ಡ ಮೊತ್ತದ್ದಾಗಿತ್ತು, ಮತ್ತು ಇದರಿಂದಾಗಿ ಗುರೂಜಿಯವರ ಆರ್ಥಿಕ ಸ್ಥಿತಿ ಕುಸಿದು ಹೋಗಿತ್ತು. ಆಗ ಅವರು ಬಹಳಷ್ಟು ನೋವು ಅನುಭವಿಸುತ್ತಾರೆ ಮತ್ತು “ನನ್ನ ಜೀವನದುದ್ದಕ್ಕೂ ಯಾರಿಗೂ ಮೋಸ ಮಾಡದ ನನಗೆ ಮೋಸವಾಗಲು ಕಾರಣವೇನು?” ಎಂದು ಚಿಂತಿಸತೊಡಗುತ್ತಾರೆ.

“ನೀವು ಸತ್ಯವನ್ನು ಕಂಡುಕೊಳ್ಳುವುದಿಲ್ಲ, ಆದರೆ ಸತ್ಯವು ನಿಮ್ಮನ್ನು ಕಂಡುಕೊಳ್ಳುತ್ತದೆ” ಎಂದು ಪವಿತ್ರ ಗ್ರಂಥವೊಂದರಲ್ಲಿ ಹೇಳಲಾಗಿದೆ.

ಇದೇ ಸಮಯದಲ್ಲಿ ದಿಕ್ಸೂಚಿ ಮತ್ತು ಕಟ್ಟಡಗಳ ನಕ್ಷೆಯ ಚಿತ್ರಗಳು ಪದೇ ಪದೇ ಗುರೂಜಿಯವರ ಕನಸುಗಳಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತವೆ. ಆಗ “ಪದೇ ಪದೇ ಇವೇ ಕನಸುಗಳು ಏಕೆ ನನ್ನನ್ನು ಕಾಡುತ್ತಿವೆ?” ಎಂದು ಗುರೂಜಿಯವರು ಆಶ್ಚರ್ಯಕ್ಕೊಳಗಾಗುತ್ತಾರೆ. ಅವರು ತಮ್ಮ ಇಂಜಿನಿಯರಿಂಗ್‌ ವಿದ್ಯಾಭ್ಯಾಸದ ಹಿನ್ನೆಲೆಯೊಂದಿಗೆ, ತಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ದಿಕ್ಷೂಚಿ ಮತ್ತು ಮನೆಯ ನಕ್ಷೆಗಳ ಮಹತ್ವವನ್ನು ಅರ್ಥೈಸಿಕೊಳ್ಳಬಹುದಾಗಿದ್ದರು.

ಮಾನವಗುರುಗಳ ಜೀವನದಲ್ಲಿ ಮಹತ್ವದ ತಿರುವು

ಇಂತಹ ಸಮಯದಲ್ಲಿ ಗುರೂಜಿಯವರ ಅಂತಃಪ್ರಜ್ಞೆಯು ಅವರಿಗೆ ಮಾರ್ಗದರ್ಶನ ನೀಡುತ್ತದೆ, “ನಮ್ಮ ಸಮಸ್ಯೆಗಳಿಗೆ ಇತರರನ್ನು ದೂಷಿಸುವ ಬದಲು, ಆ ಸಮಸ್ಯೆಗಳ ಮೂಲ ಕಾರಣವನ್ನು ಕಂಡುಕೊಳ್ಳುವುದು ಬಹಳ ಮುಖ್ಯ” ಇದನ್ನು ಗುರೂಜಿಯವರು ಅರ್ಥಮಾಡಿಕೊಳ್ಳುತ್ತಾರೆ. ಕೊನೆಗೂ ಅವರು ಉತ್ತರವನ್ನು ಕಂಡುಕೊಂಡು ಬಿಡುತ್ತಾರೆ.

-“ಸಂತೋಷವೆಂಬುದು ಕೇವಲ ನಮ್ಮೊಳಗೆ ಮಾತ್ರವಲ್ಲ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇರುತ್ತದೆ”. ನಮ್ಮ ಸುತ್ತಮುತ್ತಲಿನ ಪ್ರದೇಶಗಳು ನಾವು ಹೆಚ್ಚಿನ ಸಮಯವನ್ನು ಕಳೆಯುವ ಪ್ರದೇಶಗಳಾಗಿರುತ್ತವೆ. ದಿನದ 24 ಘಂಟೆಗಳಲ್ಲಿ ನಾವು ನಮ್ಮ ಮನೆ ಅಥವಾ ಕಾರ್ಯಸ್ಥಳಗಳಲ್ಲಿ 20 ಘಂಟೆಗಳನ್ನು(80 ರಿಂದ 85%) ಸಮಯವನ್ನು ಕಳೆಯುತ್ತೇವೆ. ಆದ್ದರಿಂದ ಈ ಎರೆಡು ಸ್ಥಳಗಳು ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರವಹಿಸುತ್ತವೆ.

ಈ ಸಮಯದಲ್ಲಿ ಗುರೂಜಿಯವರು ಸಾವಿರಾರು ಗ್ರಾಮಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡುತ್ತಾರೆ. ವೃತ್ತಿಯಿಂದ ಒಬ್ಬ ಸಿವಿಲ್‌ ಇಂಜಿನಿಯರ್‌ ಆಗಿದ್ದ ಇವರು, ಹಲವಾರು ಪ್ರದೇಶಗಳನ್ನು ಸುತ್ತುತ್ತಾ ಅಲ್ಲಿನ ಜನರು ಮನೆಯನ್ನು ನಿರ್ಮಿಸಿಕೊಂಡ ರೀತಿ ಮತ್ತು ಆ ಜನರು ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆಗ ಪ್ರತಿಯೊಂದು ಸ್ಥಳವೂ ಕೂಡ ವಿಶಿಷ್ಟವಾಗಿದೆ ಎಂಬುದನ್ನು ಗುರೂಜಿಯವರು ಕಂಡುಕೊಳ್ಳುತ್ತಾರೆ.

ಒಂದು ಕುಟುಂಬದಲ್ಲಿ ತಂದೆಯಾದವನು ಮನೆಯನ್ನು ನಡೆಸುತ್ತಿರುತ್ತಾನೆ, ಆ ಸಮಯದಲ್ಲಿ ಅವನು ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸಿರುತ್ತಾನೆ. ತಂದೆಯಾದವನು ನಿವೃತ್ತಿಯಾದ ನಂತರ ಆ ಮನೆಯನ್ನು ನಡೆಸುವ ಜವಾಬ್ದಾರಿ ಮಗನ ಮೇಲಿರುತ್ತದೆ. ಆ ಮಗನು ಮನೆ ನಡೆಸಲು ಶುರು ಮಾಡಿದಾಗ ತಂದೆಯ ಕಾಲಕ್ಕೆ ಗಳಿಸಿದ ಹಣ ಮತ್ತು ಖ್ಯಾತಿಯನ್ನು ಕಳೆದುಕೊಂಡು ಬಿಡುತ್ತಾನೆ. ಇಬ್ಬರೂ ಕೂಡ ಒಂದೆ ಮನೆಯನ್ನು ನಡೆಸುತ್ತಿದ್ದರು, ಇಬ್ಬರೂ ಒಂದೇ ತರನಾದ ಫಲಿತಾಂಶವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಗುರೂಜಿಯವರು ಸಾಕಷ್ಟು ಕುಟುಂಬಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಗಮನಿಸುತ್ತಾರೆ.

2000ನೇ ಇಸವಿಯಲ್ಲಿ ಮಾನವ ಗುರು ಜಗತ್ತಿನಲ್ಲಿರುವಂತಹ ಪ್ರತಿಯೊಂದು ಕುಟುಂಬಕ್ಕೆ ಅನನ್ಯ ಜ್ಞಾನದ  ಮಾರ್ಗದರ್ಶನವನ್ನು ರಚಿಸಿದ್ದಾರೆ, ಇದು ಪ್ರಾಚೀನ ಭಾರತೀಯ ಮೌಲ್ಯ ಹಾಗು ಸಂಸ್ಕೃತಿಯನ್ನು ಆಧಾರಿಸಿದ್ದು ವೈಜ್ಞಾನಿಕ ತಳಹದಿಯನ್ನು ಹೊಂದಿದೆ, ಇದು ಯಾವುದೇ ಜಾತಿ- ಧರ್ಮಕ್ಕೆ ಸೀಮೀತವಾಗಿರದೇ ಕೇವಲ 9 ರಿಂದ 180 ದಿನಗಳಲ್ಲಿ ಇಡೀ ಕುಟುಂಬದ ಆನಂದಮಯ ಜೀವನದ ಮಾರ್ಗವನ್ನು ಬಹಿರಂಗಪಡಿಸುತ್ತದೆ.

ಮಾನವ ಗುರುವಿನ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುತ್ತಾ ಹೋದ ನಂತರ, ಕುಟುಂಬದ ಪ್ರತಿಯೊಬ್ಬ ಸದಸ್ಯರು ಕೇವಲ 9 ರಿಂದ 180 ದಿನಗಳಲ್ಲಿ ದುಃಖಮಯ ಜೀವನದಿಂದ ಆನಂದಮಯ ಜೀವನಕ್ಕೆ ಅಥವಾ ಅಸಂತೋಷದ ಜೀವನದಿಂದ ಸಂತಸಮಯ ಜೀವನದ ಪರಿವರ್ತನೆಯ ಅನುಭವವನ್ನು ಪಡೆಯುತ್ತಾರೆ.

ಅದರಂತೆ ಮಾನವ ಗುರು ಅವರು ತಮ್ಮ ಅನನ್ಯ ಜ್ಞಾನದ ಪ್ರಯಾಣವನ್ನು ಆರಂಭಿಸುತ್ತಾರೆ. ಮೊದಲಿಗೆ ಗುರೂಜಿಯವರು ಅನನ್ಯ ಜ್ಞಾನದ ಶಕ್ತಿಯನ್ನು ತಮ್ಮ ಮೇಲೆ ಪ್ರಯೋಗಿಸಿಕೊಳ್ಳುತ್ತಾರೆ. ಆಗ ಗುರೂಜಿಯವರಲ್ಲಿ ಕಂಡು ಬಂದ ಬದಲಾವಣೆ ಮತ್ತು ಅವರು ಆನಂದಮಯ ಜೀವನದ ಕಡೆಗೆ ಪರಿವರ್ತನೆಯಾಗುತ್ತಿರುವುದನ್ನು ಅವರ ಸ್ನೇಹಿತರು ಗಮನಿಸುತ್ತಾರೆ. ಗುರೂಜಿಯವರ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸ್ವತಃ ನೋಡಿದ ಅವರ ಸ್ನೇಹಿತರು ಮುಂದೆ ಮಾನವ ಗುರುವಿನಿಂದ ಅನನ್ಯ ಜ್ಞಾನದ ಮಾರ್ಗದರ್ಶನ ಪಡೆದುಕೊಂಡು ಅದನ್ನು ಅನುಸರಿಸುವ ಮೂಲಕ ಕೇವಲ 9 ರಿಂದ 180 ದಿನಗಳಲ್ಲಿ ತಮ್ಮ ಜೀವನದಲ್ಲಿ ಆನಂದಮಯ ಜೀವನವನ್ನು ಅನುಭವಿಸುತ್ತಾರೆ.

ʻʻವಸುದೈವ ಕುಟುಂಬಕಂ ಕಡೆ ಪಯಣʼʼ

ʻʻವಸುದೈವ ಕುಟುಂಬಕಂ ಕಡೆ ಪಯಣʼʼ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬವು ಅವರ ಜಾತಿ ಅಥವಾ ಧರ್ಮವನ್ನು ಪರಿಗಣಿಸದೆ, ವಿಶ್ವಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಆತ್ಮನಿರ್ಭರ ಕುಟುಂಬವಾದಾಗ ಮಾತ್ರ, ಈ ಜಗತ್ತನ್ನು ಆತ್ಮನಿರ್ಭರ ಆಗಿಸಬಹುದು.

ತಮಗೆ ದೊರೆತಿರುವ ಅನನ್ಯ ಜ್ಞಾನವನ್ನು ಕೇವಲ ಒಬ್ಬ ವ್ಯಕ್ತಿ ಯಿಂದ ಜಗತ್ತಿನಲ್ಲಿರುವ ಪ್ರತಿಯೊಂದು ಕುಟುಂಬಕ್ಕೆ ಹಂಚಲು ಸಾಧ್ಯವಿಲ್ಲ ಎಂಬುದನ್ನು ಗುರೂಜಿಯವರು ಅರಿತುಕೊಳ್ಳುತ್ತಾರೆ. ಈ ಮಹತ್ತರವಾದ ಉದ್ದೇಶಕ್ಕಾಗಿ ಅವರು “ಸಿ. ಜಿ. ಪರಿವಾರ” ಎಂಬ ಜಾಗತಿಕ ಸಂಸ್ಥೆಯೊಂದನ್ನು ಪ್ರಾರಂಭಿಸುತ್ತಾರೆ. ಈ ಸಂಸ್ಥೆಯ ಅಡಿಯಲ್ಲಿ ಗುರೂಜಿಯವರು, ವಿಶ್ವಾದ್ಯಂತ ಮನುಕುಲದ ಸೇವೆ ಮಾಡಲು ಬೆರಳೆಣಿಕೆಯಷ್ಟು ಶಿಷ್ಯರಿಗೆ ತರಬೇತಿಯನ್ನು ನೀಡುತ್ತಾರೆ. ಈ ಉದಾತ್ತವಾದ ಉದ್ದೇಶಕ್ಕಾಗಿ ಪ್ರಸ್ತುತ 1000 ಕ್ಕೂ ಅಧಿಕ ಶಿಷ್ಯರು ಮಾನವ ಗುರುವಿನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

10 ದಶಲಕ್ಷಕ್ಕೂ ಹೆಚ್ಚು ಕುಟುಂಬಗಳು ಮಾನವ ಗುರುವಿನ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ಪಡೆದುಕೊಂಡಿದ್ದು, ಅವರೆಲ್ಲರು ಇಂದಿಗೂ ಕೂಡ ಆನಂದಮಯ ಜೀವನ ನಡೆಸುತ್ತಿದ್ದಾರೆ. ಜಗತ್ತಿನ ಪ್ರತಿಯೊಂದು ಕುಟುಂಬವನ್ನು ಆತ್ಮನಿರ್ಭರ ಕುಟುಂಬವನ್ನಾಗಿ ಪರಿವರ್ತಿಸುವ ಮಾನವ ಗುರುವಿನ ಪ್ರಯಾಣ ಮುಂದುವರೆದಿದೆ.

Facebook Twitter Instagram Linkedin Youtube