ಅವರು ಮಾನವೀಯ ಸೇವೆಗಾಗಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ.

  1. ಜೀವನ ಸಮಸ್ಯೆ ಮುಕ್ತ ಗ್ರಾಮ
  2. ಶಿಕ್ಷಣ ಸಮಸ್ಯೆ ಮುಕ್ತ ಗ್ರಾಮ
  3. ಸಾಮೂಹಿಕ ವಿವಾಹ
  4. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟುವುದು

ಜೀವನ ಸಮಸ್ಯೆ ಮುಕ್ತ ಗ್ರಾಮ

JEEVAN SAMASYA MUKT

ಮಾನವ ಅಭಿವೃದ್ಧಿಯನ್ನು ಮಾಡದ ಹೊರತು, ಗ್ರಾಮೀಣಾಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ಮಾನವ ಗುರು ಅವರು ಅರ್ಥ ಮಾಡಿಕೊಂಡಿದ್ದರು. ಯಾವಾಗ ಪ್ರತಿಯೊಂದು ಕುಟುಂಬವು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಸಾಧ್ಯವಾಗುತ್ತದೆಯೋ.. ಅಥವಾ ಯಾವಾಗ ಪ್ರತಿಯೊಂದು ಕುಟುಂಬವು ಆತ್ಮನಿರ್ಭರ ಕುಟುಂಬವಾಗುತ್ತದೆಯೋ ಆಗ ಮಾತ್ರ ನಾವು ಗ್ರಾಮೀಣಾಭಿವೃದ್ಧಿಯನ್ನು ಪರಿಣಾಮಕಾರಿಯಾಗಿ ಮಾಡಬಹುದು.

ಮಾನವ ಗುರು ಅವರು 2015 ರಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೊಡಚಿ ಗ್ರಾಮವನ್ನು ದತ್ತು ಪಡೆದುಕೊಳ್ಳುತ್ತಾರೆ. ಈ ಮಾದರಿಯ ದತ್ತು ಪಡೆಯುವ ಕಾರ್ಯದಲ್ಲಿ ಈ ಗ್ರಾಮವು ಭಾರತದ ಮೊದಲ ಮಾದರಿ ಗ್ರಾಮವಾಗಿದೆ. ಈ ಗ್ರಾಮವನ್ನು ದತ್ತು ಪಡೆದ 8 ತಿಂಗಳೊಳಗೆ ಈ ಗ್ರಾಮವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪರಿವರ್ತನೆಗೊಳ್ಳುತ್ತದೆ.

ಮಾನವ ಗುರು ಅವರು 640 ಕುಟುಂಬಗಳಿಗೆ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ನೀಡಿದ್ದರು. ಅವರ ಮಾರ್ಗದರ್ಶನವನ್ನು ಸರಿಯಾಗಿ ಅನುಸರಿಸಿದವರು, ಕೇವಲ 9 ರಿಂದ 180 ದಿನಗಳಲ್ಲಿ ತಮ್ಮ ಜೀವನದ ಎಲ್ಲಾ ಸಮಸ್ಯೆಗಳಲ್ಲಿ ಹೊರ ಬಂದು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಿದ್ದಾರೆ. ಗೊಡಚಿ ಗ್ರಾಮದ ಎಲ್ಲ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ, ಯುವಕರು ತಮ್ಮ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ಕಂಡುಕೊಳ್ಳುತ್ತಾರೆ, ವ್ಯಾಪಾರಸ್ಥರು ತಮ್ಮ ವ್ಯವಹಾರಗಳಲ್ಲಿ ಯಶಸ್ಸು ಕಂಡರೆ, ರೈತರು ತಮ್ಮ ಕೃಷಿಯಲ್ಲಿ ಅಚ್ಚರಿಯ ಅಭಿವೃದ್ಧಿಯನ್ನು ಕಾಣುತ್ತಾರೆ, ಸಂಬಂಧಿಕರ ಮದ್ಯೆ ಅನ್ಯೋನ್ಯತೆ ಮೂಡುತ್ತದೆ, ಗ್ರಾಮಸ್ಥರು ಆರ್ಥಿಕವಾಗಿ ಸದೃಢರಾಗುತ್ತಾರೆ, ವಿವಾಹದಲ್ಲಿ ವಿಳಂಬತೆ ಮತ್ತು ಹಲವಾರು ಅನಾರೋಗ್ಯದಿಂದ ಬಳಲುತ್ತಿದ್ದವರ ಎಲ್ಲ ಸಮಸ್ಯೆಗಳು ಅಚ್ಚರಿಯ ರೀತಿಯಲ್ಲಿ ನಿವಾರಣೆಯಾಗುತ್ತವೆ.

ಶಿಕ್ಷಣ ಸಮಸ್ಯೆ ಮುಕ್ತ ಗ್ರಾಮ

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂಬ ಮಹತ್ತರ ಉದ್ದೇಶದಿಂದ ಮಾನವ ಗುರು ಅವರು 2018 ರಲ್ಲಿ, ಮೂಲ ಸೌಕರ್ಯಗಳಿಂದ ಹಿಂದುಳಿದ ಮಕ್ಕಳಿಗೆ 10 ನೇ ತರಗತಿಯವರೆಗೆ ಉಚಿತ ಶಿಕ್ಷಣ ನೀಡುವುದಕ್ಕಾಗಿ ಕರ್ನಾಟಕದ ಧಾರವಾಡ ಜಿಲ್ಲೆಯ, ಕಲಘಟಗಿ ತಾಲ್ಲೂಕಿನ ಬಿ ಶಿಗಿಗಟ್ಟಿ ಎಂಬ ಗ್ರಾಮದಲ್ಲಿ ಶಾಲೆಯೊಂದನ್ನು ಆರಂಭಿಸಿದ್ದಾರೆ. ವಿಶಿಷ್ಟ ವಾತಾವರಣದಲ್ಲಿ, ಮಾನವ ಗುರುವಿನ ಅನನ್ಯ ಜ್ಞಾನದ ಮಾರ್ಗದರ್ಶನದ ಸಹಾಯದಿಂದ ಅಪಾರವಾದ ವಿಶ್ವ ಶಕ್ತಿಯನ್ನು ಮನೆ ಹಾಗು ಕಾರ್ಯಸ್ಥಳದಲ್ಲಿ ಬಳಸಿಕೊಂಡು ಬರೇ ಶೈಕ್ಷಣಿಕವಾಗಿ ಅಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಹಾಗು ಸಾಮಾಜಿಕವಾಗಿ ಮಕ್ಕಳು ಸಂಪೂರ್ಣ ಅಭಿವೃದ್ಧಿ ಪಡೆಯಬಹುದು

SHIKSHAN SAMSYA

ಸಾಮೂಹಿಕ ವಿವಾಹ

Samuhik

ಈ ಸಾಮಾಜಿಕ ಸೇವೆಗಳ ಭಾಗವಾಗಿ, ಮಾನವ ಗುರು ಅವರು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಜನರು ಗೌರವದಿಂದ ಮದುವೆಯಾಗಲು ಕಾರಣೀಕರ್ತರಾಗಿದ್ದಾರೆ ಮತ್ತು ಅನ್ಯೋನ್ಯವಾಗಿ ವೈವಾಹಿಕ ಜೀವನ ನಡೆಸಲು ಆಶೀರ್ವಾದ ಮತ್ತು ಮಾರ್ಗದರ್ಶನ ನೀಡುತ್ತಿದ್ದಾರೆ.

ರೈತರ ಆತ್ಮಹತ್ಯೆಯನ್ನು ತಡೆಗಟ್ಟುವಿಕೆ

ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದರೂ ಕೂಡ ರೈತರು ಮತ್ತು ಅವರ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಗಳ ಮಟ್ಟವು ಹೆಚ್ಚುತ್ತಲೇ ಇರುವ ಪರಿಸ್ಥಿತಿ ಇಂದಿಗೂ ಮುಂದುವರೆದಿದೆ. ಕೃಷಿ ಸೇರಿದಂತೆ, ರೈತರನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳ ಒತ್ತಡಕ್ಕೆ ಮಣಿದು ರೈತರು ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಪರಿಸ್ಥಿತಿಯ ತೀವ್ರತೆಯನ್ನು ಅರಿತುಕೊಂಡ ಮಾನವ ಗುರು ಅವರು ರೈತರ ಸಮಸ್ಯೆಗಳನ್ನು ನಿವಾರಿಸಲು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಮತ್ತು ತಮ್ಮ ಅನನ್ಯ ಜ್ಞಾನದ ಮಾರ್ಗದರ್ಶನವನ್ನು ರೈತರು ಅಳವಡಿಸಿಕೊಂಡು ಅದರ ಲಾಭವನ್ನು ರೈತರಿಗೆ ನೀಡಲು ಮುಂದಾಗಿದ್ದಾರೆ. ಮಾನವ ಗುರು ಅವರ  ಮಾರ್ಗದರ್ಶನವನ್ನು ಪಾಲಿಸುತ್ತಾ, ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ರೈತರು ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಅನುಭವಿಸುತ್ತಿದ್ದಾರೆ. ರೈತರು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಇದು ಸಹಾಯ ಮಾಡುತ್ತದೆ. ಇದರಿಂದಾಗಿ ರೈತರಲ್ಲಿ ಬರುವ ಆತ್ಮಹತ್ಯೆಯಂತಹ ಆಲೋಚನೆಗಳನ್ನು ತಡೆಗಟ್ಟುತ್ತದೆ.

Farmer

ಮಾನವ ಗುರು ಅವರು ಜಗತ್ತಿನಾದ್ಯಂತ 10 ದಶಲಕ್ಷಕ್ಕೂ ಅಧಿಕ ಕುಟುಂಬಗಳ ಜೀವನವನ್ನು ಪರಿವರ್ತಿಸಿದ್ದಾರೆ.

  • ನಿರೀಕ್ಷೆಯಂತೆ ಅಂಕಗಳನ್ನು ಗಳಿಸಲು ಸಾಧ್ಯವಾಗದಿರುವುದು
  • ಏಕಾಗ್ರತೆಯ ಕೊರತೆ, ನೆನಪಿನ ಶಕ್ತಿಯಲ್ಲಿ ಕುಂದುವಿಕೆ
  • ಆತಂಕ, ಒತ್ತಡ ಮತ್ತು ಖಿನ್ನತೆ

  • ಕೆಲಸದಲ್ಲಿ ಅರ್ಹತೆಗೆ ತಕ್ಕ ಹುದ್ದೆ ಸಿಗದಿರುವುದು
  • ಕೆಲಸ ಮಾಡುವ ಸ್ಥಳದಲ್ಲಿ ಅತೃಪ್ತಿ
  • ವೃತ್ತಿ ಅಥವಾ ಆರ್ಥಿಕ ಬೆಳವಣಿಗೆ

  • ಲಾಭ ಮತ್ತು ಅಭಿವೃದ್ಧಿ ಕಾಣದಾಗುವುದು
  • ಪಾಲುದಾರರ ಸಂಬಂಧದಲ್ಲಿ ಸಮಸ್ಯೆ
  • ಕಾನೂನು ಸಮಸ್ಯೆಗಳು
  • ಬ್ರ್ಯಾಂಡ್‌ನ ಖ್ಯಾತಿಯ ಕೊರತೆ

  • ಕಡಿಮೆಯಾದ ಕೃಷಿ ಉತ್ಪಾದಕತೆ
  • ಭೂಮಿ ಫಲವತ್ತತೆಗೆ ಮತ್ತು ನೀರಾವರಿಗೆ ಎದುರಾಗುವ ಸವಾಲುಗಳು
  • ಹಣಕಾಸು ಮತ್ತು ಮೂಲಸೌಕರ್ಯಗಳ ಸಮಸ್ಯೆಗಳು

  • ಮದುವೆಯಲ್ಲಿ ವಿಳಂಬತೆ
  • ಸೂಕ್ತವಾದ ಬಾಳಸಂಗಾತಿಯನ್ನು ಹುಡುಕಲು ಸಾಧ್ಯವಾಗದಿರುವುದು
  • ಎರಡನೆ ಮದುವೆಗೆ ಸೂಕ್ತವಾದ ಬಾಳ ಸಂಗಾತಿ ಸಿಗದಿರುವುದು

  • ವಿಚ್ಛೇಧನದ ಸಮಸ್ಯೆಗಳು
  • ಗಂಡ ಹೆಂಡತಿಯ ನಡುವಿನ ಸಂಬಂಧ
  • ಕುಟುಂಬ ಸದಸ್ಯರು/ಸಂಬಂಧಿಕರೊಂದಿಗೆ ಹೊಂದಾಣಿಕೆ ಇಲ್ಲದಿರುವುದು

  • ಸಾಲದ ಮರುಪಾವತಿ ಸಾಧ್ಯವಾಗದಿರುವುದು
  • ಉಳಿತಾಯದ ಕೊರತೆ
  • ಆಸ್ತಿಯ ವಿವಾದಗಳು

  • ರೋಗನಿರೋಧಕ ಶಕ್ತಿಯ ಕೊರತೆ
  • ದೀರ್ಘಕಾಲದ ಖಾಯಿಲೆಗಳಿಂದ ಬಳಲುತ್ತಿರುವುದು
  • ಕಳಪೆ ಮಟ್ಟದ ಆರೋಗ್ಯ

Facebook Twitter Instagram Linkedin Youtube