ನಾವು ಸುಮಾರು 75 ವರ್ಷಗಳ ಕಾಲ ಬದುಕಿರುತ್ತೇವೆ ಎಂದುಕೊಳ್ಳೋಣ. ಒಂದು ದಿನದಲ್ಲಿ 24 ಘಂಟೆಗಳಿರುತ್ತವೆ ಎಂದ ಮೇಲೆ,
- ನಾವು ದಿನದ 8 ಘಂಟೆಗಳ ಕಾಲ ನಿದ್ದೆ ಮಾಡುತ್ತೇವೆ. ಅಂದರೆ ನಮ್ಮ ಆಯಸ್ಸಿನ 25 ವರ್ಷಗಳನ್ನು ನಾವು ನಿದ್ದೆ ಮಾಡುತ್ತಾ ಕಳೆಯುತ್ತೇವೆ.
- ನಾವು ದಿನದ 8 ಘಂಟೆಗಳನ್ನು ಕಾಲ ಶಾಲೆ/ಕಾಲೇಜು/ಉದ್ಯೋಗದಲ್ಲಿ ಕಳೆಯತ್ತೇವೆ. ಈ ಕೆಲಸಗಳಲ್ಲಿ ನಾವು ನಮ್ಮ ಜೀವನದ 25 ವರ್ಷಗಳನ್ನು ಕಳೆಯುತ್ತೇವೆ.
- ನಾವು ಮನೆಯೊಳಗಿನ ಚಟುವಟಿಕೆಗಳಿಗಾಗಿ ದಿನದ 4 ಘಂಟೆಗಳನ್ನು ಕಳೆಯುತ್ತೇವೆ. ಉದಾಹರಣೆಗೆ, ಊಟ, ಸ್ನಾನ, ಅಡುಗೆ, ಟಿ,ವ್ಹೀ ನೋಡುವುದು, ಓದುವುದು, ಕುಟುಂಬದೊಂದಿಗೆ ಸಮಯ ಕಳೆಯುವುದು.. ಇತ್ಯಾದಿಗಳು. ಈ ಕೆಲಸಗಳಿಗಾಗಿ ನಾವು ನಮ್ಮ ಜೀವನದ 12.5 ವರ್ಷಗಳನ್ನು ಕಳೆಯುತ್ತೇವೆ.
- ಪ್ರಯಾಣ, ಶಾಪಿಂಗ್, ಮಕ್ಕಳನ್ನು ಶಾಲೆಗೆ ಬಿಡುವುದು ಮುಂತಾದ ಮನೆಯ ಹೊರಗಿನ ಚಟುವಟಿಕೆಗಳಿಗಾಗಿ ನಾವು ದಿನದ 4 ಗಂಟೆಗಳನ್ನು ಕಳೆಯುತ್ತೇವೆ. ಅಂದರೆ ಇದು ನಮ್ಮ ಜೀವನದ 12.5 ವರ್ಷಗಳು.ಆದ್ದರಿಂದ 24 ಗಂಟೆಗಳಲ್ಲಿ, ನಾವು ನಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ಸುಮಾರು 20 ಗಂಟೆಗಳನ್ನು (80 ರಿಂದ 85%) ಕಳೆಯುತ್ತೇವೆ. ಆದ್ದರಿಂದ ಎರಡೂ ಸ್ಥಳಗಳು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.