ನಾನೊಬ್ಬ ಕೃಷಿಕನಾಗಿದ್ದು ಕಳೆದ 35 ವರ್ಷಗಳಿಂದ ರೇಷ್ಮೆ ಬೆಳೆ ಬೆಳೆಯುತ್ತಿದ್ದೇನೆ. ಅದರ ಜೊತೆ ಜೊತೆಗೆ ಸಾಸಿವೆ ಸೇರಿದಂತೆ ಮುಂತಾದ ಬೆಳೆಗಳನ್ನು ನಾನು ಬೆಳೆಯುತ್ತಿದ್ದೆನೆ.
ಸಾಮಾನ್ಯವಾಗಿ ನಾವು ವಾಸಿಸುವ ಪ್ರದೇಶದಲ್ಲಿ ಮಳೆ ಕಡಿಮೆ ಬರುತ್ತದೆ. ಆದ್ದರಿಂದ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯುವುದು ಕಷ್ಟಕರವಾಗಿತ್ತು. ರೇಷ್ಮೆ ಬೆಳೆಗೆ ದೊಡ್ಡ ಮೊತ್ತದೆ ಹೂಡಿಕೆ ಬೇಕು ಮತ್ತು ಅದನ್ನು ತುಂಬಾ ಕಾಳಜಿಯಿಂದ ಬೆಳೆಯಬೇಕು. ಆದರೆ ರೇಷ್ಮೆ ಬೆಳೆಯ ಎಲ್ಲಾ ಹಂತಗಳನ್ನು ಪೂರ್ಣಗೊಳಿಸದ ಕಾರಣ ನಾನು ಹಾಕಿದ ಬಂಡವಾಳ ಮರಳಿ ಬಾರದೆ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿದೆ.
ದಿನದಿಂದ ದಿನಕ್ಕೆ ನಮ್ಮ ಕುಟುಂಬ ಬಡವಾಗುತ್ತಾ ಹೋಯಿತು. ಒಂದು ಹಂತದಲ್ಲಿ, ನಮಗೆ ಒಂದು ಹೊತ್ತಿನ ಊಟಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಆಗ ನಾನು ಸಾಲ ಮಾಡಲು ಶುರು ಮಾಡಿದೆ. ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹಣವನ್ನು ಪಡೆದುಕೊಂಡೆ. ಹೀಗೆ ಸಾಲದ ಮೊತ್ತ ಹೆಚ್ಚುತ್ತಾ ಹೋಗಿ ಕೆಲವೇ ದಿನಗಳಲ್ಲಿ ನಾನು ಬೆಟ್ಟದಂತಹ ಸಾಲದ ಮೇಲೆ ಕುಳಿತಿದ್ದೆ. ನಾನು ಬೆಳೆದ ರೇಷ್ಮೆ ಉತ್ಪನ್ನವನ್ನೆಲ್ಲ ನಾನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದಾಗಲೆಲ್ಲ, 5000, 10,000 ಅಥವಾ 20,000 ಸಾವಿರ ಹಣವನ್ನು ಪಡೆದುಕೊಳ್ಳುತ್ತಿದ್ದೆ, ಆದರೆ ಆ ಹಣ ಕಣ್ಣು ಮಿಟಿಕಿಸುವಷ್ಟರಲ್ಲಿ ಖರ್ಚಾಗಿ ಬಿಡುತ್ತಿತ್ತು. ಬಂದ ಹಣದಲ್ಲಿ ಪ್ರತಿಯೊಂದು ರೂಪಾಯಿಯನ್ನು ನಾನು ಸಾಲ ತೀರಿಸಲು ಮತ್ತು ಅನಿರೀಕ್ಷಿತವಾಗಿ ಎದುರಾದ ಖರ್ಚುಗಳಿಗಾಗಿ ಬಳಸುವಂತಾಗಿತ್ತು.
ಕೊನೆ ಕೊನೆಗೆ ನನ್ನ ಪರಿಸ್ಥಿತಿ ಎಲ್ಲಿಗೆ ತಲುಪಿತ್ತು ಎಂದರೆ, ನಮ್ಮ ಮನೆಗೆ ಯಾರಾದರು ಸಂಬಂಧಿಕರು ಅಥವಾ ಅಥಿತಿಗಳು ಬಂದರೆ ಅವರಿಗೆ ಸರಿಯಾಗಿ ಉಪಚಾರ ಮಾಡಲು ಸಹ ನನ್ನ ಬಳಿ ಹಣ ಇರುತ್ತಿರಲಿಲ್ಲ. ಅವರಿಗೆ ಸರಿಯಾಗಿ ಊಟ ಮಾಡಿಸಿ ಕಳಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇದು ನನ್ನ ಕುಟುಂಬಕ್ಕೂ ಅವಮಾನಕರವಾಗಿತ್ತು. ಈ ಅಥಿತಿಗಳು ಯಾಕಾದರೂ ಮನೆಗೆ ಬರುತ್ತಾರೋ? ಎಂಬ ಅಸಹಾಯಕತೆ ನನ್ನನ್ನು ಕಾಡುತ್ತಿತ್ತು.
ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಾನು ನನ್ನೆಲ್ಲಾ ಭರವಸೆಗಳನ್ನು ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಈ ಸಮಸ್ಯೆಗಳಿಂದ ಹೊರಬರಲು ನನಗೆ ದಾರಿ ಕಾಣದಾಗಿತ್ತು. “ನಾನು ಆತ್ಮಹತ್ಯೆ ಮಾಡಿಕೊಂಡರೆ, ಕೊಟ್ಟಿರೋ ಹಣವನ್ನ ವಾಪಸ್ ಕೋಡೊಕಾಗದೇ ಸತ್ತು ಹೋದ ಹೇಡಿ, ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೆ ತನ್ನ ಕುಟುಂಬವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡ. ಎಂದು ಜನ ನನ್ನ ಬಗ್ಗೆ ಆಡಿಕೊಳ್ಳುತ್ತಾರೆ.” ಎಂಬ ಆಲೋಚನೆ ನನ್ನನ್ನು ಮತ್ತಷ್ಟು ಚಿಂತೆಗೆ ಈಡು ಮಾಡಿತ್ತು.
ಹೀಗೆ ಚಿಂತೆ ಮತ್ತು ಖಿನ್ನತೆಗೆ ಒಳಗಾಗಿ ದಿನಗಳನ್ನು ಸಾಗಿಸುತ್ತಿರುವಾಗ, ಒಂದು ದಿನ ಟಿ ವ್ಹೀ ನೋಡುತ್ತಾ ಕುಳಿತಾಗ ಮಾನವ ಗುರು ಅವರ ದಿವ್ಯ ಜ್ಞಾನದ ಬಗ್ಗೆ ತಿಳಿದುಕೊಂಡೆ. ಆ ಕಾರ್ಯಕ್ರಮದಲ್ಲಿ ಗುರೂಜಿಯವರ ಮಾತುಗಳನ್ನು ಕೇಳಿ ನಾನು ತುಂಬಾ ಪ್ರಭಾವಿತನಾಗಿದ್ದೆ. ಆಗ ತಡಮಾಡದೆ ನಾನು ಗುರೂಜಿಯವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ನಿರ್ಧರಿಸಿದೆ ಮತ್ತು ಮಾನವ ಗುರುವಿನಿಂದ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಂಡೆ. ಮುಂದೆ ಕೆಲವೇ ತಿಂಗಳಲ್ಲಿ, ಅಚ್ಚರಿಯ ರೀತಿಯಲ್ಲಿ ನಾನು ನನ್ನ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಂಡೆ.
ಆಶ್ಚರ್ಯಕರ ರೀತಿಯಲ್ಲಿ ಆ ವರ್ಷ ನಾನು ಕೃಷಿಯಲ್ಲಿ ಉತ್ತಮ ಇಳುವರು ಮತ್ತು ಬಂಪರ್ ಲಾಭವನ್ನು ಪಡೆದುಕೊಂಡೆ. ನನ್ನ ರೇಷ್ಮೆ ಕೃಷಿ ಈಗ ಉತ್ತಮವಾಗಿ ನಡೆಯುತ್ತಿದೆ ಮತ್ತು ಕೃಷಿಯಲ್ಲಿ ಎದುರಾಗಿದ್ದ ಎಲ್ಲಾ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗಿವೆ. ಆಗ ನಾನು ಬ್ಯಾಂಕಿನಿಂದ ಸಾಲ ಪಡೆದುಕೊಂಡು, ಮೊದಲು ನಾನು ಮಾಡಿದ್ದ ಸಾಲವನ್ನೆಲ್ಲಾ ತೀರಿಸಿದೆ. ಈಗ ನಾನು ನಿಗದಿತವಾಗಿ ಬ್ಯಾಂಕಿಗೆ ಸಾಲ ಮರುಪಾವತಿ ಮಾಡುತ್ತಿದ್ದೇನೆ, ಈಗ ನಾನು ಯಾವುದಕ್ಕೂ ಚಿಂತಿಸುವುದಿಲ್ಲ, ಏಕೆಂದರೆ ಈಗ ನನ್ನ ಬ್ಯಾಂಕ್ ಖಾತೆಯಲ್ಲಿ ಸದಾ ಹಣವಿರುತ್ತದೆ. ಭವಿಷ್ಯದ ಉಪಯೋಗಕ್ಕಾಗಿ ನಾನು ಈಗ ಹಣಕಾಸಿನಲ್ಲಿ ಉಳಿತಾಯ ಮಾಡಲು ಸಮರ್ಥನಾಗಿದ್ದೇನೆ. ಈಗ ನನ್ನ ಮನೆಗೆ ಯಾರಾದರೂ ಅಥಿತಿಗಳು ಬಂದರೆ ಚಿಂತಿಸುವುದಿಲ್ಲ, ಆರ್ಥಿಕವಾಗಿ ನಾನು ಸದೃಢನಾಗಿದ್ದೆನೆ. ಈಗ 50 ಅಲ್ಲ 500 ಅಥಿತಿಗಳು ನಮ್ಮ ಮನೆಗೆ ಬಂದರೂ ಸಂತೋಷದಿಂದ ಅವರನ್ನು ಸತ್ಕರಿಸಲು ನಾನು ಸಮರ್ಥನಿದ್ದೇನೆ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರು ಇಂದು ಆರೋಗ್ಯಕರ, ಸಂತೋಷ ಮತ್ತು ಸಮೃದ್ಧ ಜೀವನವನ್ನು ಸಾಗಿಸುತ್ತಿದ್ದೇವೆ.
ನಮ್ಮ ದೇಶದಲ್ಲಿ, ರೈತನ ಆರ್ಥಿಕ ಸಮಸ್ಯೆಗಳು ಸರ್ಕಾರಕ್ಕೆ ಎದುರಾದ ಸಮಸ್ಯೆಗಳಲ್ಲಿ ದೊಡ್ಡ ಸವಾಲಾಗಿದೆ, ವಿಶೇಷವಾಗಿ ಸಾಲಮನ್ನಾ. ಪ್ರತಿವರ್ಷ ರೈತರು ತಾವು ಪಡೆದುಕೊಂಡ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಸರ್ಕಾರದ ಬಳಿ 1000 ಕೋಟಿ ರೂಗಳ ಸಾಲ ಮನ್ನಾ ಮಾಡುವಂತೆ ವಿನಂತಿಸುತ್ತಾರೆ. ನನ್ನ ಅನುಭವದ ಪ್ರಕಾರ, ನಮ್ಮ ದೇಶದ ಪ್ರತಿಯೊಬ್ಬ ರೈತನು ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಂಡರೆ, ಸಾಲವನ್ನು ಮನ್ನಾ ಮಾಡುವಂತೆ ಸರ್ಕಾರದ ಬಳಿ ಅಂಗಲಾಚುವ ಅವಶ್ಯಕತೆಯೇ ಇರುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ರೈತನು ಸಾಲವನ್ನು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿರುತ್ತಾನೆ ಮತ್ತು ಆರ್ಥಿಕವಾಗಿ ಸದೃಢನಾಗಿರುತ್ತಾನೆ.
ಆದ್ದರಿಂದ ಎಲ್ಲಾ ರೈತರು ಮಾನವ ಗುರುವಿನ ವೈಯಕ್ತಿಕರಿಸಿದ ಮಾರ್ಗದರ್ಶನವನ್ನು ಅಳವಡಿಸಿಕೊಳ್ಳಬೇಕು ಮತ್ತು ಇಂದು ನನ್ನ ಕುಟುಂಬವು ಆನಂದಮಯ ಜೀವನವನ್ನು ಅನುಭವಿಸುತ್ತಿರುವಂತೆ ನಿಮ್ಮ ಕುಟುಂಬ ಸಹ ಆನಂದಮಯ ಜೀವನವನ್ನು ಅನುಭವಿಸುವಂತಾಗಬೇಕೆಂದು ನಾನು ಬಯಸುತ್ತೇನೆ. ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರು ನಮ್ಮ ಕಷ್ಟ ಕಾಲದಲ್ಲಿ ದೇವರಂತೆ ಬಂದು ನಮಗೆ ಸಹಾಯ ಮಾಡಿದರು. ನಾನು ಗುರೂಜಿಯವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ ಮತ್ತು ಗುರೂಜಿಯವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.