ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.
ಸೂಕ್ತವಾದ ಹಾಗೂ ಸರಿಯಾದ ವೃತ್ತಿಯನ್ನು ಆಯ್ಕೆ ಮಾಡುವುದು ನಮ್ಮ ಜೀವನದಲ್ಲಿ ನಾವು ಮಾಡುವಂತಹ ಪ್ರಮುಖ ಮತ್ತು ನಿರ್ಣಾಯಕ ನಿರ್ಧಾರಗಳಲ್ಲಿ ಒಂದಾಗಿದೆ, ಆದರೆ ನಮ್ಮಲ್ಲಿ ಸಾಕಷ್ಟು ಜನರು ಯಾವುದೇ ವೃತ್ತಿ ದೊರೆತರು ಅವರಿಗೆ ಅದು ತೃಪ್ತಿಕರವಾಗಿರುವುದಿಲ್ಲ ಇದರಿಂದ ಅವರು ಆ ಉದ್ಯೊಗದಲ್ಲಿ ಇರುವುದಿಲ್ಲ ಅದನ್ನು ಬದಲಾವಣೆ ಮಾಡುತ್ತಾರೆ, ಇನ್ನು ಕೆಲವೊಮ್ಮೆ ವೃತ್ತಿಯ ಆಯ್ಕೆ ಸರಿಯಾಗಿದೆ ಆದರೆ ನಮಗೆ ಸರಿಯಾದ ಕೆಲಸವನ್ನು ಹುಡುಕಲು ಸಾಧ್ಯವಾಗುವುದಿಲ್ಲ, ಇಷ್ಟೇ ಅಲ್ಲದೇ ಇನ್ನು ಅನೇಕರು ತಪ್ಪು ವೃತ್ತಿಯನ್ನು ಆಯ್ಕೆ ಮಾಡಿರುತ್ತಾರೆ.
ಸಾಮನ್ಯವಾಗಿ ನಾವು ವೃತ್ತಿ / ಉದ್ಯೋಗದಲ್ಲಿ ಇಂಥಹ ಸಮಸ್ಯೆಗಳನ್ನು ಎದುರಿಸುತ್ತೇವೆ: