2000 ನೇ ಇಸವಿಯಿಂದ ಮಾನವ ಗುರು ತಮ್ಮ ದಿವ್ಯ ಜ್ಞಾನದ ಮೂಲಕ ತಾವು ವಾಸಿಸುವ ಮನೆಯಲ್ಲಿಯೇ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಲು ಕುಟುಂಬದ ಎಲ್ಲಾ ಸದಸ್ಯರಿಗೆ ಅನನ್ಯವಾದ ಮಾರ್ಗವನ್ನು ತೋರಿಸಿದ್ದಾರೆ.
ಸಂಪತ್ತು / ಹಣಕಾಸಿನಲ್ಲಿ ಪ್ರಗತಿ ಸಾಧಿಸಲು ಮಾನವ ಗುರುವಿನ ಮಾರ್ಗದರ್ಶನ ಬಹಳ ಸರಳವಾಗಿದೆ
ಪ್ರತಿಯೊಬ್ಬ ವ್ಯಕ್ತಿಯು ಸಹ ಅವರ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ 4 ಹೆಚ್ಚಿನ ಕಂಪನ ತರಂಗಳು ಮತ್ತು 4 ಕಡಿಮೆ ಕಂಪನ ತರಂಗಗಳನ್ನು ಹೊಂದಿರುತ್ತಾರೆ, ಆ 4 ಹೆಚ್ಚಿನ ಕಂಪನ ತರಂಗಗಳ ಸಹಾಯದಿಂದ ವಿಶ್ವ ಶಕ್ತಿ ಅನನ್ಯ ಕಂಪನ ತರಂಗದ ಜೊತೆ ಸಂಪರ್ಕ ಸಾಧಿಸಲು ಆ ವ್ಯಕ್ತಿಗೆ ಮಾನವ ಗುರು ಮಾರ್ಗದರ್ಶನ ನೀಡುತ್ತಾರೆ.
ಯಾವಾಗ ವ್ಯಕ್ತಿ ತಮ್ಮ ಕಂಪನ ತರಂಗಗಳ ಮೂಲಕ ವಿಶ್ವ ಶಕ್ತಿ ಜೊತೆ ಸಂಪರ್ಕ ಸಾಧಿಸಿದಾಗ, ವಿಶ್ವ ಶಕ್ತಿ ಆ ವ್ಯಕ್ತಿಯ ದೇಹ ಮತ್ತು ಅವರು ವಾಸಿಸುವ ಮನೆಯಲ್ಲಿ ಸಂಚಲನ ಶುರು ಮಾಡುತ್ತದೆ. ಇದಾದ ನಂತರ ಈ ಶಕ್ತಿಯು ವ್ಯಕ್ತಿಯ ದೇಹದಲ್ಲಿ ರಕ್ತದೊಂದಿಗೆ ಹರಿಯುತ್ತೆ, ಆಗ ಇದು ದೇಹದಲ್ಲಿ ರಕ್ತನಾಳಗಳು ಮತ್ತು ಅಪಧಮನಿಗಳ ಮೂಲಕ ಸಂಪೂರ್ಣವಾಗಿ ದೇಹದಲ್ಲಿ ಪರಿಚಲನೆಯಾಗುತ್ತೆ, ಆಗ ಅದು ದೇಹದಲ್ಲಿನ ಅಂಗಗಳಲ್ಲಿನ ಅಡೆತಡೆಯನ್ನು ತೆರವುಗೊಳಿಸುತ್ತದೆ, ಇಷ್ಟೇ ಅಲ್ಲದೇ ದೇಹದಲ್ಲಿ ಟ್ರಿಲಿಯನ್ಸ್‌ಗಟ್ಟಲೆ ಇರುವಂತಹ ಜೀವಕೊಶಗಳಿಗೆ ಮತ್ತು ಇನ್ನೀತರ ಅಂಗಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ಅವು ಬಲಿಷ್ಟವಾಗಲು ಸಹಾಯ ಮಾಡುತ್ತದೆ. ಇದರ ಜೊತೆ ವ್ಯಕ್ತಿಯ ದೇಹ ಸುಗಮವಾಗಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.