ಪ್ರತಿಯೊಬ್ಬ ವ್ಯಕ್ತಿಯು ಹುಟ್ಟಿನಿಂದ ಸಾವಿನವರೆಗೂ ಜೀವನದಲ್ಲಿ ಹಲವಾರು ಹಂತಗಳನ್ನು ದಾಟಬೇಕಾಗುತ್ತೆ, ಅದರಲ್ಲಿ ಪ್ರಮುಖವಾಗಿ ಶಿಕ್ಷಣ, ವೃತ್ತಿ ಜೀವನ, ಮದುವೆ, ಸಂಬಂಧ, ಹಣಕಾಸು, ಆರೋಗ್ಯ ಮತ್ತು ನಿವೃತ್ತ ಜೀವನ.
ಮನೆ, ಇದು ನಾವು ನಮ್ಮ ಕುಟುಂಬಗಳೊಂದಿಗೆ ನಮ್ಮ ಜೀವನವನ್ನು ಕಳೆಯುವಂತಹ ಬಹಳ ಪ್ರಮುಖವಾದ ಸ್ಥಳವಾಗಿದೆ, ಆದರೆ ಅದೇಷ್ಟೋ ಕುಟುಂಬಗಳು ಬಾಡಿಗೆ ಮನೆ ಅಥವಾ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ, ಅದರೆ ಅವರೆಲ್ಲರು ಸಹ ಮುಂದೊಂದು ದಿನ ಒಂದು ಸುಂದರವಾದ ಮನೆಯನ್ನು ಹೊಂದುವ ಕನಸು ಕಾಣುತ್ತಾರೆ, ಯಾಕಂದ್ರೆ ಸ್ವಂತ ಮನೆ ಎಂಬುದು ಒಂದು ಸುರಕ್ಷತೆಯ ಬಾವನೆಯನ್ನು ಮನಸ್ಸಿನಲ್ಲಿ ಮೂಡಿಸುತ್ತೆ ಹಾಗೂ ಕುಟುಂಬಕ್ಕೆ ಹೆಮ್ಮೆಯ ಭಾವನೆಯನ್ನು ಸಹ ಉಂಟು ಮಾಡುತ್ತೆ, ಇಷ್ಟೇ ಅಲ್ಲದೇ ಮನೆ ಅ ಆ ಕುಟುಂಬ ಹಾಗು ವ್ಯಕ್ತಿಯ ಸ್ಥಾನಮಾನವನ್ನು ಸಾಮಾಜದಲ್ಲಿ ಹೆಚ್ಚಿಸುತ್ತೆ.
ಸಾಮನ್ಯವಾಗಿ ಕನಸಿನ ಮನೆಯನ್ನು ನಿರ್ಮಿಸುವಾಗ, ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಪ್ರತಿಯೊಂದು ಕುಟುಂಬಗಳು ಈ ರೀತಿಯಾದ ಸಮಸ್ಯೆಗಳನ್ನು ಎದುರಿಸುತ್ತವೆ: