ನನ್ನ ಮಗಳ ಹೆಸರು ತರಣಿ. ಅವಳು ತುಂಬಾ ಬುದ್ಧಿವಂತಳಾಗಿದ್ದಳು, ಅದರೆ ಅವಳು ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿರಲಿಲ್ಲ. ಈ ಕಾರಣದಿಂದಾಗಿ ಅವಳ ಶಿಕ್ಷಕರು ಅವಳ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಅವಳ ತರಗತಿಯಲ್ಲಿ ಅವಳನ್ನು ಸಾಮಾನ್ಯ ವಿದ್ಯಾರ್ಥಿ ಅಂದು ಪರಿಗಣಿಸಲಾಗಿತ್ತು.
ಒಂದು ದಿನ ನಾವು ಟಿ ವ್ಹೀ ನೋಡುತ್ತಾ ಕುಳಿತಾಗ ಮಾನವ ಗುರು ಅವರ ದಿವ್ಯ ಜ್ಞಾನದ ಬಗ್ಗೆ ತಿಳಿದುಕೊಂಡೆವು. ಗುರೂಜಿಯವರ ಆ ಕಾರ್ಯಕ್ರಮದಲ್ಲಿ ನಮ್ಮ ಮಗಳಂತೆ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಹಲವಾರು ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಇಂದು ಉತ್ತಮ ಸಾಧನೆ ಮಾಡುತ್ತಿರುವುದನ್ನು ಕಂಡು ನಮಗೆ ಬಹಳ ಆಶ್ಚರ್ಯವಾಯಿತು. ಆ ಮಕ್ಕಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಾದ ಪ್ರಗತಿಯ ಬಗ್ಗೆ ಹೇಳುತ್ತಿರುವುದನ್ನು ನೋಡುತ್ತಿದ್ದಂತೆ, ಮಾನವ ಗುರು ಅವರ ದಿವ್ಯ ಜ್ಞಾನದ ಬಗ್ಗೆ ನಾನು ಕೂಡ ತಿಳಿದುಕೊಳ್ಳಬೇಕೆಂಬ ಆಸೆ ಬಲವಾಯಿತು. ಆಗ ನಾನು ತಡಮಾಡದೆ ಟಿ ವ್ಹೀ ಪರದೆಯ ಮೇಲೆ ಕಾಣಿಸುತ್ತಿದ್ದ ಗುರೂಜಿಯವರ ಸಂಸ್ಥೆಯ ನಂಬರ್ ತೆಗೆದುಕೊಂಡು ಕರೆ ಮಾಡಿದೆ, ಮತ್ತು ಅವರು ನೀಡಿದ ಮಾರ್ಗದರ್ಶನವನ್ನು ಪಾಲಿಸಲು ಶುರುಮಾಡಿದೆ.
ಕೆಲವೇ ತಿಂಗಳುಗಳೊಳಗೆ ನನ್ನ ಮಗಳ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ನಾನು ಗಮನಿಸಿದೆ. ಈಗ ನನ್ನ ಮಗಳು ವಿದ್ಯಾಭ್ಯಾಸದಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಸಾಕಷ್ಟು ಉತ್ಸಾಹ ಹೊಂದಿದ್ದಾಳೆ.
ಪ್ರಸ್ತುತ ನನ್ನ ಮಗಳ ಶಿಕ್ಷಕರು ಅವಳನ್ನು ಶಾಲೆಯ “ಹೌಸ್ ಕ್ಯಾಪ್ಟನ್” ಆಗಿ ಮತ್ತು ಅವಳ ತರಗತಿಯ ಸಹಾಯಕ ಮಾನಿಟರ್‌ನ್ನಾಗಿ ಮಾಡಿದ್ದಾರೆ. ಅವಳ ಶಿಕ್ಷಕರು ಅವಳಿಗೆ ಬೇರೆ ಬೇರೆ ಕೆಲಸಗಳನ್ನು ಮತ್ತು ಜವಾಬ್ದಾರಿಯನ್ನು ನೀಡಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಶಾಲೆಯಲ್ಲಿ ಅವಳನ್ನು ತುಂಬಾ ಬುದ್ದಿವಂತ ಹುಡುಗಿ ಎಂದು ಪರಿಗಣಿಸುತ್ತಾರೆ. ಇವೆಲ್ಲವನ್ನು ಹೊರತು ಪಡಿಸಿ, ಅವಳು ತನ್ನದೆ ಆದ ಯೂಟ್ಯೂಬ್ ಚಾನೆಲ್‌ನ್ನು ಸಹ ಪ್ರಾರಂಭಿಸಿದ್ದಾಳೆ ಮತ್ತು ಅದಕ್ಕಾಗಿ ನಿಯಮಿತವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಅವಳು ತುಂಬಾ ಸಕ್ರೀಯಳಾಗಿದ್ದಾಳೆ.
ನಮ್ಮ ಮಗಳ ವಿದ್ಯಾಭ್ಯಾಸದಲ್ಲಾದ ಬದಲಾವಣೆಗಳಿಂದ ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಮಗಳು ಶೈಕ್ಷಣಿಕವಾಗಿ ಮಾತ್ರವಲ್ಲ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿಯೂ ಪ್ರಗತಿ ಹೊಂದಿದ್ದಾಳೆ.
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಪೋಷಕರು ತಮ್ಮ ಜೀವನದ ಸುಮಾರು 20 ವರ್ಷಗಳನ್ನು ತಮ್ಮ ಮಕ್ಕಳಿಗಾಗಿ ಕಳೆಯುತ್ತಾರೆ. ಆದರೆ ನಿಮ್ಮ ಮಕ್ಕಳು ಮಾನವ ಗುರು ಅವರ ಮಾರ್ಗದರ್ಶನವನ್ನು ಪಾಲಿಸುತ್ತಾ ಹೋದರೆ, ನನ್ನ ಪ್ರಕಾರ ನೀವು ಇನ್ನು ಮುಂದೆ ಅವರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಗುರೂಜಿಯವರ ಮಾರ್ಗದರ್ಶನವನ್ನು ಪಾಲಿಸುತ್ತಾ ಹೋದಂತೆ ನಿಮ್ಮ ಮಕ್ಕಳು ಶಿಕ್ಷಣದಲ್ಲಿ ಮತ್ತು ಅವರ ಜೀವನದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪ್ರಗತಿ ಹೊಂದುತ್ತಾ ಹೋಗುತ್ತಾರೆ. ತಮ್ಮ ದಿವ್ಯ ಜ್ಞಾನದಿಂದ ನಮಗೆ ಮಾರ್ಗದರ್ಶನ ನೀಡಿದ ಮಾನವ ಗುರು ಶ್ರೀ ಚಂದ್ರಶೇಖರ ಗುರೂಜಿಯವರಿಗೆ ನಮ್ಮ ಕುಟುಂಬದ ಪರವಾಗಿ ಮತ್ತು ನನ್ನ ಪರವಾಗಿ ಅಭಿನಂದನೆಗಳು ಮತ್ತು ಧನ್ಯವಾದಗಳು.