ಮಾನವ ಗುರು ಅವರು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಒಬ್ಬ ದೇವರನ್ನು ನಂಬುತ್ತಾರೆ. ಗುರೂಜಿ ಅವರು ಪ್ರತಿಯೊಂದು ಧರ್ಮದ ಜನರಿಗೆ ಎರೆಡು ಪ್ರಶ್ನೆಗಳನ್ನು ಇಡುತ್ತಾರೆ.

ದೇವರು ಎಲ್ಲಿದ್ದಾನೆ?

ಈ ಪ್ರಶ್ನೆಗೆ ಪ್ರತಿಯೊಂದು ಧರ್ಮದ ಜನರಿಂದ ಬರುವ ಉತ್ತರ – ದೇವರು ಎಲ್ಲಾ ಕಡೆ ಇದ್ದಾನೆ.

ನೀವು ದೇವರನ್ನು ನೋಡಿದ್ದೀರಾ?

ಈ ಪ್ರಶ್ನೆಗೆ ಪ್ರತಿಯೊಂದು ಧರ್ಮದ ಜನರಿಂದ ಬರುವ ಉತ್ತರ “ಇಲ್ಲ” ಎಂಬುದಾಗಿರುತ್ತದೆ.

ಎಲ್ಲಾ ಧರ್ಮಗಳ ಅಂತಿಮ ಉತ್ತರ ದೇವರು ಎಲ್ಲೆಡೆ ಇದ್ದಾನೆ ಆದರೆ ನೋಡಲಾಗುವುದಿಲ್ಲ.

ಮಾನವ ಗುರು ಅವರ ಪ್ರಕಾರ, ಈ ಬ್ರಹ್ಮಾಂಡದಲ್ಲಿ ಒಂದು ಶಕ್ತಿ ಇದೆ ಮತ್ತು ಈ ಶಕ್ತಿಯು ಎಲ್ಲೆಡೆ ಇರುತ್ತದೆ, ಆದರೆ ನಾವು ಅದನ್ನು ನೋಡಲು ಸಾಧ್ಯವಿಲ್ಲ.

ದೇವರು ಎಲ್ಲಾ ಕಡೆ ಇದ್ದಾನೆ ಆದರೆ ನೋಡಲು ಸಾಧ್ಯವಿಲ್ಲ. ಅದೇ ರೀತಿ ಶಕ್ತಿಯು ಎಲ್ಲಾ ಕಡೆ ಇದೆ ಮತ್ತು ಅದನ್ನು ಸಹ ನೋಡಲು ಸಾಧ್ಯವಿಲ್ಲ.

ಹಾಗಾದರೆ ನಾವು ದೇವರನ್ನು ಏಕೆ ಶಕ್ತಿ ಎಂದು ಕರೆಯಬಾರದು?

ದೇವರು = ಶಕ್ತಿ

ದೇವರು = ಶಕ್ತಿ

ಹಾಗಾದರೆ, ದೇವರು ಯಾರು ಮತ್ತು ಈ ಶಕ್ತಿ ಯಾವುದು?

ಈ ಬ್ರಹ್ಮಾಂಡದಲ್ಲಿರುವ ದೇವರು ಒಬ್ಬನೇ. ನಾವು ಅವನನ್ನು ವಿಶ್ವ ದೇವರು ಎಂದು ಕರೆಯುತ್ತೇವೆ.

ಈ ಬ್ರಹ್ಮಾಂಡದಲ್ಲಿ ಕೇವಲ ಒಂದೇ ಒಂದು ಶಕ್ತಿ ಇರುತ್ತದೆ. ನಾವು ಇದನ್ನು ವಿಶ್ವ ಶಕ್ತಿ ಎಂದು ಕರೆಯುತ್ತೇವೆ.

ಹೀಗಿರುವಾಗ, ನಾವು ವಿಶ್ವ ಶಕ್ತಿಯನ್ನು= ವಿಶ್ವ ದೇವರು ಎಂದು ಏಕೆ ಕರೆಯಬಾರದು?

ವಿಶ್ವ ಶಕ್ತಿಯೊಂದಿಗೆ ನಾವು ಸಂಪರ್ಕ ಸಾಧಿಸುವುದು ಎಲ್ಲಿ?

ನಾವು ನಮ್ಮ ಹೆಚ್ಚಿನ ಸಮಯವನ್ನು ಮನೆ ಮತ್ತು ಉದ್ಯೋಗ ಸ್ಥಳದಲ್ಲಿ ಕಳೆಯುತ್ತೇವೆ, ಅಂದರೇ ದಿನದ 24 ಗಂಟೆಯಲ್ಲಿ 20 ಗಂಟೆಗಳ ಕಾಲ ಈ ಎರಡೇ ಸ್ಥಳದಲ್ಲಿ ಕಳೆಯುತ್ತೇವೆ, ಅದ್ದರಿಂದ ನಾವು ಈ ಎರಡು ಸ್ಥಳದಲ್ಲಿಯೇ ವಿಶ್ವಶಕ್ತಿಯೊಂದಿಗೆ ಸಂಪರ್ಕ ಮಾಡಬೇಕಾಗುತ್ತದೆ.

ಮಾನವ ಗುರು ಅವರು ತಮ್ಮ ಅನನ್ಯ ಜ್ಞಾನದ ಮಾರ್ಗದರ್ಶನದ ಮೂಲಕ ಕುಟುಂಬದ ಎಲ್ಲ ಸದಸ್ಯರು ವಿಶ್ವ ಶಕ್ತಿಯೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತಾರೆ. ಯಾವಾಗ ಕುಟುಂಬದ ಪ್ರತಿಯೊಬ್ಬ ಸದಸ್ಯರು ಮಾನವ ಗುರುವಿನ ಮಾರ್ಗದರ್ಶನವನ್ನು ಅಳವಡಿಸಿಕೊಂಡು, ಮಾನವ ಗುರು ಅವರ ಮಾರ್ಗದರ್ಶನವನ್ನು ಪಾಲಿಸುತ್ತಾ ಹೋಗುತ್ತಾರೊ ಕೇವಲ 9 ರಿಂದ 180 ದಿನಗಳಲ್ಲಿ ಆನಂದಮಯ ಜೀವನವನ್ನು ಆರಂಭಿಸುತ್ತಾರೆ.

Facebook Twitter Instagram Linkedin Youtube